
ಸುಳ್ಯ: ಮಹರ್ಷಿ ವಾಲ್ಮೀಕಿ ಶಾಲೆ ಬಾಳಿಲದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಲಕ್ಷ್ಮಣಗೌಡ ಧ್ವಜಾರೋಹಣ ನಡೆಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಮೇಲ್ವಿಚಾರಕರು, ಶಿಕ್ಷಕ ವೃಂದದವರು, ಪೋಷಕರು, ಶಾಲಾ ಸಿಬ್ಬಂದಿಗಳು ಮತ್ತು ಪುಟಾಣಿಗಳು ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ಸಿಹಿ ಹಂಚಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶಿವಕುಮಾರ್ ಮಾತನಾಡಿ ಸ್ವಾತಂತ್ರ ದಿನದ ಮಹತ್ವ ಮತ್ತು ಜವಾಬ್ದಾರಿಯನ್ನು ತಿಳಿಸಿದರು.. ಮೇಲ್ವಿಚಾರಕರಾದ ವಿಶ್ವನಾಥ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಭಾಧ್ಯಕ್ಷರಾದ ಲಕ್ಷ್ಮಣ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿಕೊಂಡು ಈ ದೇಶಕ್ಕೆ ಮಾದರಿಯಾಗಿ ಉತ್ತಮ ಕೊಡುಗೆಯನ್ನು ನೀಡಬೇಕಾಗಿ ವಿನಂತಿಸಿದರು.

ಸಭೆಯಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷೆ ತುಳಸಿ. ಬಾಳಿಲ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ. ಶಾಲಾ ಶಿಕ್ಷಕರು, ಪೋಷಕರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಸುಜಾತ ಅವರು ಸ್ವಾಗತಿಸಿ, ಶಿಕ್ಷಕಿ ಉಮಾಶ್ರೀ ಅವರು ವಂದಿಸಿದರು, ಶಿಕ್ಷಕಿ ಭವ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.