
ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಕೆಎಫ್‌ಸಿಯಲ್ಲಿ ಗ್ರಾಹಕರಿಗೆ ಕೊಳೆತ ಆಹಾರ ಪೂರೈಕೆ ಮಾಡಿದ ಆರೋಪದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಕೆಎಫ್‌ಸಿಯಲ್ಲಿ 6 ತಿಂಗಳು ಹಳೆಯ ಮಾಂಸ ಪತ್ತೆ, ಅವಧಿ ಮೀರಿದ ಎಣ್ಣೆ ಕಂಡು ಬಂದಿದೆ. ಇವೆಲ್ಲವನ್ನೂ ಅಧಿಕಾರಿಗಳು ವಶಪಡಿಸಿಕೊಂಡು ಬೀಗ ಜಡಿದಿದ್ದಾರೆ.

ಕೆಎಫ್‌ಸಿಯಿಂದ ತಂದಿದ್ದ ಚಿಕನ್ ಖಾದ್ಯ ಕೆಟ್ಟ ವಾಸನೆ ಬಂದಿತ್ತು. ತಕ್ಷಣ ಅವರು ಅರೋಗ್ಯ ಸಚಿವ ಯು.ಟಿ. ಖಾದರ್ ಗಮನಕ್ಕೆ ತಂದಿದ್ದಾರೆ. ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಜಂಟಿಯಾಗಿ ಕೆಎಫ್‌ಸಿಗೆ ದಾಳಿ ಮಾಡಿದ್ದಾರೆ.