ಕೊಡಂಗೆ ಪಿ.ಎಂ.ಶ್ರೀ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 80ನೆೇ ಸ್ವಾತಂತ್ರ್ಯೋತ್ಸವ

ಬಂಟ್ವಾಳ: ಪಿ. ಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ, ಕೊಡಂಗೆ. ಬಿ. ಸಿ ರೋಡ್, ಬಂಟ್ವಾಳ ದಲ್ಲಿ 80 ನೆೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.
ಪಿ. ಎಂ ಶ್ರೀಶಾಲೆ ಕೊಡಂಗೆ ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೈದರ್ ರವರು ಧ್ವಜಾರೋಹಣ ನೆರೆವೆರಿಸಿದರು. Lkg ಯಿಂದ 7 ನೆೇ ತರಗತಿ ವರೆಗಿನ ವಿದ್ಯಾರ್ಥಿಗಳಿಂದ ಭಾಷಣ ನಡೆದವು.

ಮುಖ್ಯ ಅತಿಥಿ ಗಳಾಗಿ ಪಿ. ಎಂ ಶ್ರೀಶಾಲೆ ಕೊಡಂಗೆ ಇದರ ಸುವರ್ಣ ಮಹೋತ್ಸವ ಸಮಿತಿ ಯ ಗೌರವ ಅಧ್ಯಕ್ಷರಾದ ಪಿ. ಎ ರಹೀಮ್ ಕೈಕಂಬ,ಅಧ್ಯಕ್ಷರಾದ ಲುಕ್ಮನ್ ಬಂಟ್ವಾಳ , ಅರಫಾ ಜುಮಾ ಮಸೀದಿ ಪರ್ಲಿಯ ಇದರ ಅಧ್ಯಕ್ಷರಾದ ಡಿ. ಪಿ ಸಿದ್ದಿಕ್ ಹಾಜಿ,ಅಡ್ವಕೆಟ್ ನೌಷದ್ ಅನ್ಸಾರಿ, ಮುಹಿಯುದ್ದೀನ್ ಜುಮಾ ಮಸೀದಿ ಸದಸ್ಯರಾದ ಶಾಹುಲ್ ಹಮೀದ್ ಎಸ್. ಪಿ, ಪರ್ಲಿಯ ಎಜುಕೇಶನ್ ಟ್ರಸ್ಟ್ ಇದರ ಕಾರ್ಯ ದರ್ಶಿ ಇಬ್ರಾಹಿಂ ಕೊಡಂಗೆ, ಹುಸೇನ್, ಇಬ್ರಾಹಿಂ ಬೊಗೋಡಿ,ಎಸ್ ಡಿ ಎಂ ಸಿ ಸದಸ್ಯರಾದ ಹನೀಫ್ ಪರ್ಲಿಯ, ಜಲೀಲ್ ಹಾಗೂ ಮಕ್ಕಳ ಪೋಷಕರು, ಶಾಲಾ ಶಿಕ್ಷಕಿಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಗುಣ ರವರು ಸ್ವಾಗತಿಸಿ, ಲವೀನಾ ನರವರು ಧನ್ಯವಾದಗೈದರು.

error: Content is protected !!