ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ!!

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಸಂಭವಿಸಿದೆ.

ಉದ್ಯಾವರ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೋಗಿ ವಾಪಸು ಚಟ್ಟೆಕಲ್ಲು ಮನೆಗೆ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದ ರಿಕ್ಷಾ ರಸ್ತೆಯಿಂದ ಪಕ್ಕದ ತೋಟಕ್ಕೆ ಪಲ್ಟಿಯಾಗಿದೆ.

ರಿಕ್ಷಾದಲ್ಲಿ ಚಾಲಕ ಸಹಿತ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ರಾತ್ರಿ ಸುಮಾರು 2 ಗಂಟೆ ವೇಳೆ ಘಟನೆ ‌ನಡೆದಿದೆ ಎಂದು ಹೇಳಲಾಗಿದೆ.

error: Content is protected !!