ಮಂಗಳೂರು: ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಸಾಮಾಜಿಕ ಕರ್ತವ್ಯವಾಗಿದೆ. ಈ ಮೂಲಕ ರೋಗಗ್ರಸ್ತರು ಹಾಗೂ ಅಪಘಾತದಲ್ಲಿ ಗಾಯಗೊಂಡವರ ಅಮೂಲ್ಯ ಜೀವ ಉಳಿಸಲು ಸಾಧ್ಯ ಎಂದು ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ತಿಳಿಸಿದರು.







ಅವರು ಭಾನುವಾರ (ಮೇ 10) ಬಜಾಲ್ ನಂತೂರ್‌ನ ಜೆ ಎಫ್ ಅಸೋಸಿಯೇಷನ್ (ರಿ) ವತಿಯಿಂದ ಯೆನೆಪೋಯ ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಂತೂರ್‌ನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದ ʻಮರ್ಹೂಮ್ ಬಿ. ಪಕ್ರುದ್ದೀನ್ ವೇದಿಕೆ’ಯಲ್ಲಿ ಜೆ ಎಫ್ ಅಸೋಸಿಯೇಷನ್ ಅಧ್ಯಕ್ಷರಾದ ನಝೀರ್ ಬಜಾಲ್ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು. ಪ್ರಖರ ಬಿಸಿಲಿನ ನಡುವೆಯೂ ಸುಮಾರು 58ಕ್ಕೂ ಹೆಚ್ಚು ಯುವಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಯುವಕರ ಈ ಸಾಮಾಜಿಕ ಕಳಕಳಿಯನ್ನು ಅತಿಥಿಗಳು ಶ್ಲಾಘಿಸಿದರು.

ಮಂಗಳೂರು ಬ್ಲಡ್ ಡೋನರ್ಸ್‌ನ ಮುಖ್ಯಸ್ಥರಾದ ಸಿದ್ದಿಕ್ ರಕ್ತದಾನಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಯೆನೆಪೋಯ ಬ್ಲಡ್ ಬ್ಯಾಂಕ್‌ನ ಡಾ. ದೀಪ್ತಿ, ಹಾಜಿ ಬಿ.ಎನ್. ಅಬ್ಬಾಸ್, ಗೌಷಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆಸೀಫ್ ಬಜಾಲ್, ಬಿ.ಜೆ.ಎಂ. ಮುಹಝಿನ್ ನಿಸಾರ್ ಹಾಸಿಮಿ ಹಾಗೂ ಮುಸ್ತಫಾ ಕಟ್ಟಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ಸದಸ್ಯರಾದ ಆಸ್ಪಕ್, ಸಾಕೀರ್, ಯು.ಪಿ. ತೌಫೀಕ್, ಎಚ್.ಎಸ್. ಮುನೀರ್, ಇಮ್ರಾನ್, ಯು.ಪಿ. ವಾಸಿಂ, ಅಫೀಜ್, ಹುಸೈನ್, ರಮೀಜ್, ಅರ್ಫಾಕ್, ಎಚ್.ಎಸ್. ತೌಸೀಫ್, ಕಲಂದರ್, ನೌಫಲ್, ಫಾವಾಜ್, ಆರಿಫ್ ಮತ್ತು ಇಸಾಕ್ ಸಹಕರಿಸಿದರು. ಇಕ್ಬಾಲ್ ಅಹಸನಿ ಸ್ವಾಗತಿಸಿ, ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಕೀಜ್ ವಂದಿಸಿದರು.