ʻಗ್ಲೋಬಲ್‌ ಡಿಗ್ರೀಸ್‌‌ ಮಂಗಳೂರು’ ಉದ್ಘಾಟನೆ: ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ತರಬೇತಿ ಅಗತ್ಯ: ಫಾ. ಪ್ರವೀಣ್ ಮಾರ್ಟಿಸ್

ಮಂಗಳೂರು: ಅಂತರರಾಷ್ಟ್ರೀಯ ಶಿಕ್ಷಣ ಸಲಹಾ ಸಂಸ್ಥೆಯಾದ ʻಗ್ಲೋಬಲ್‌ ಡಿಗ್ರೀಸ್‌ ಮಂಗಳೂರು’ (SDS 360 LLP) ಮಂಗಳವಾರ ನಗರದ ಎ.ಜೆ ಗ್ರಾಂಡ್ ಹೋಟೆಲ್‌ನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು. ವಿದೇಶಿ ಶಿಕ್ಷಣ ಮತ್ತು ಜಾಗತಿಕ ವೃತ್ತಿಜೀವನದತ್ತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ಸಂಸ್ಥೆಯು ಕಾರ್ಯಾರಂಭ ಮಾಡಿದೆ.

.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಫಾ. ಪ್ರವೀಣ್ ಮಾರ್ಟಿಸ್ ಅವರು, ಮಂಗಳೂರಿನ ಶೈಕ್ಷಣಿಕ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿದರು. “ನಮ್ಮ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ಲೋಬಲ್‌ ಡಿಗ್ರೀಸ್‌ ಸಂಸ್ಥೆಯು ಮಂಗಳೂರಿಗೆ ಅತ್ಯಂತ ಅವಶ್ಯಕವಾಗಿತ್ತು. ವಿದ್ಯಾರ್ಥಿಗಳು ಕಲಿಯುವುದರ ಜೊತೆಗೆ ವಿದೇಶಗಳನ್ನು ಸುತ್ತಬೇಕು ಮತ್ತು ಅಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಅಂತರರಾಷ್ಟ್ರೀಯ ಶಿಕ್ಷಣಕ್ಕೆ ಹೊಸ ದಿಕ್ಸೂಚಿ: ಮಂಗಳೂರಿನಲ್ಲಿ ‘ಗ್ಲೋಬಲ್ ಡಿಗ್ರೀಸ್’ ನಾಳೆಯಿಂದ ಕಾರ್ಯಾರಂಭ!

ಸಂಸ್ಥೆಯ ಸಹ-ಸಂಸ್ಥಾಪಕರಾದ ಶಿಜೋಮನ್ ಯೇಸುದಾಸ್ ಮಾತನಾಡಿ, ವಿದೇಶಿ ವ್ಯಾಸಂಗದ ಹಾದಿಯಲ್ಲಿ ಎದುರಾಗುವ ಸವಾಲುಗಳಾದ ಸರಿಯಾದ ಕೋರ್ಸ್ ಆಯ್ಕೆ, ವಿಶ್ವವಿದ್ಯಾಲಯಗಳ ಶಾರ್ಟ್‌ಲಿಸ್ಟಿಂಗ್ ಮತ್ತು ವೀಸಾ ಪ್ರಕ್ರಿಯೆಗಳಿಗೆ ಸಂಸ್ಥೆಯು ಪರಿಣಿತರಿಂದ ಮಾರ್ಗದರ್ಶನ ನೀಡಲಿದೆ. ಉಚಿತ IELTS ತರಬೇತಿ, ಶಿಷ್ಯವೇತನ (Scholarship) ಪಡೆಯಲು ಸಹಕಾರ, ಶೈಕ್ಷಣಿಕ ಸಾಲದ ನೆರವು ಹಾಗೂ ವಿದೇಶಕ್ಕೆ ಹಾರುವ ಮುನ್ನ ಮತ್ತು ಹಾರಿದ ನಂತರದ ಸೇವೆಗಳನ್ನು (Pre-departure & Post-arrival services) ಸಂಸ್ಥೆಯು ಒದಗಿಸಲಿದೆ. ವಿಶೇಷವಾಗಿ, AI ಆಧಾರಿತ ಮಾಕ್ ಇಂಟರ್ವ್ಯೂ ತರಬೇತಿಯ ಮೂಲಕ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಸಂಸ್ಥೆ ಮುಂದಾಗಿದೆ‌ ಎಂದರು.


ಸಂಸ್ಥೆಯ ಮತ್ತೋರ್ವ ಸಹ-ಸಂಸ್ಥಾಪಕರಾದ ದೀಪಾ ಪ್ರಭು ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣದ ಹಾದಿಯಲ್ಲಿ ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಗುರಿ. ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಲು ನಾವು ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ” ಎಂದು ತಿಳಿಸಿದರು.

ಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋನಾಲ್ಡ್ ನಜ್ರತ್ ಹಾಗೂ ಡಾ. ಹರೀಶ್ ಕೆ. ಉಪಸ್ಥಿತರಿದ್ದು, ಸಂಸ್ಥೆಯ ನೂತನ ಸಾಹಸಕ್ಕೆ ಶುಭ ಕೋರಿದರು.

error: Content is protected !!