ಉಡುಪಿ: ಟ್ರಾಕ್ಟರ್ ಟಿಲ್ಲರ್ ವಾಹನ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಉಡುಪಿಯ ಕೊಕ್ಕರ್ಣೆ ಮೊಗವೀರ ಪೇಟೆ ಬಳಿ ನಡೆದಿದೆ.

ಪಕೀರಪ್ಪ ಮೃತ ಚಾಲಕ.
ಇವರು ಕೊಕ್ಕರ್ಣೆಗೆ ಹುಲ್ಲು ತೆಗೆಯಲು ಟ್ಯಾಕ್ಟರ್ ವಾಹನದಲ್ಲಿ ಹೋಗುತ್ತಿದ್ದಾಗ ಟ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯ ಬದಿ ಮಗುಚಿ ಬಿದ್ದಿದ್ದು, ಈ ವೇಳೆ ಟ್ರ್ಯಾಕ್ಟರ್‌ನಲ್ಲಿದ್ದ ಕೂಲಿ ಕಾರ್ಮಿಕ ಅಡಿಯಪ್ಪ ಮಾದರ ಗಾಯಗೊಂಡಿದ್ದಾರೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ಪಕೀರಪ್ಪ ಅವರನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ರಸ್ತೆ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.