VOP Exclusive!!! ಕಿಡ್ನಾಪ್ ನಾಟಕದ ಅಸಲಿ ಬಣ್ಣ ಬಯಲು! ಅನಿ ಮಂಗಳೂರು ಬೆನ್ನಿಗೆ ಚೂರಿ ಹಾಕಿದವರು ಯಾರು?

ಮಂಗಳೂರು: ಕಿಡ್ನಾಪ್ ಆಗಿದ್ದೇನೆ ಅಂತ ಮೀಡಿಯಾ ಮುಂದೆ ಬಂದು ಕಣ್ಣೀರು ಹಾಕಿದ್ದ ಅನಿಲ್ ಕುಮಾರ್ ಎಂಬ ಅಸಾಮಿ, ಈಗ ತಾನೇ ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾನೆ ಎಂದು ಅನಿ ಕೆಫೆ ಮಾಲಕಿ ಅನಿ ಮಂಗಳೂರು ಹೇಳಿದ್ದಾರೆ. ವಾಯ್ಸ್‌ ಆಫ್‌ ಪಬ್ಲಿಕ್‌ ಜೊತೆ ಮಾತನಾಡಿದ ಅವರು, ಪ್ರಕರಣ ಯಾವ ಹಂತಕ್ಕೆ ತಲುಪಿದೆ ಎನ್ನುವುದನ್ನು ಬಹಿರಂಗಪಡಿಸಿದ್ದು, ತನ್ನ ಜೊತೆ ಕೊರಗಜ್ಜ ದೈವ ಇದೆ. ಸತ್ಯ ಖಂಡಿತಾ ಹೊರಗಡೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲು ಮೀಡಿಯಾ ಮುಂದೆ ಬಂದಿದ್ದ ಮೈಸೂರು ನಂಜನಗೂಡು ನಿವಾಸಿ ಅನಿಲ್ ಕುಮಾರ್, “ನಾನು ಬಸ್ ಸ್ಟ್ಯಾಂಡ್‌ನಲ್ಲಿ ಬಸ್ಸಿಗೆ ಕಾಯ್ತಿದ್ದೆ, ಯಾರೋ ಬಂದು ನನ್ನನ್ನು ಕಿಡ್ನಾಪ್ ಮಾಡಿದ್ರು” ಅಂತ ಒಂದೇ ಸಮನೆ ರಾಗ ಎಳೆದಿದ್ದ. ಆದರೆ ತನಿಖೆ ಶುರುವಾದ ಮೇಲೆ ಸೀನ್ ಫುಲ್ ಉಲ್ಟಾ ಹೊಡೆದಿದೆ. ಪೊಲೀಸರ ಮುಂದೆ ನಿಂತಾಗ ಅನಿಲ್ ಕುಮಾರ್ ಬಾಯಿ “ನಾನು ಮೂರ್ನಾಲ್ಕು ಸಲ ಮಂಗಳೂರಿಗೆ ಹೋಗಿ ಬಂದಿದ್ದೇನೆ” ಅಂತ ಹೇಳಿದ್ದ. ಅಲ್ಲಾ ಸ್ವಾಮಿ, ಕಿಡ್ನಾಪ್ ಆದವನು ಪದೇ ಪದೇ ಹೋಗಿ ಬರೋಕೆ ಸಾಧ್ಯವೋ ಎಂದು ಅನಿ ಪ್ರಶ್ನಿಸಿದ್ದಾರೆ.

ವಿಚಾರಣೆ ನಡೆಸಿದ ಮೇಡಂ (ಪೊಲೀಸ್ ಅಧಿಕಾರಿ) ತೀಕ್ಷ್ಣವಾಗಿ ಪ್ರಶ್ನೆ ಹಾಕಿದ್ದಾರೆ. “ನೀನು ಮಂಗಳೂರಿನ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡ್ತಿದ್ದೆಯಲ್ಲ, ಅವಾಗ ಯಾಕೆ ಯಾರ ಹತ್ರನೂ ಹೇಳಲಿಲ್ಲ? ಊರಿಗೆ ಹೋಗಿ ಬಂದಿದ್ದೀಯಲ್ಲ, ಅವಾಗ ಯಾಕೆ ಕಂಪ್ಲೇಂಟ್ ಕೊಡಲಿಲ್ಲ?” ಅಂತ ಕೇಳಿದಾಗ ಅನಿಲ್ ಕುಮಾರ್ ಮುಖ ಕಪ್ಪಿಟ್ಟಿದೆ. ಅನಿಲ್ ಹೇಳಿದ್ದೆಲ್ಲಾ ʻಕಟ್ಟುಕಥೆ’ ಮತ್ತು ʻಸುಳ್ಳು’ ಅನ್ನೋದು ತನಿಖೆಯಲ್ಲಿ ಈಗ ಜಗಜ್ಜಾಹೀರಾಗಿದೆ ಎಂದು ವಿವರಿಸಿದ್ದಾರೆ.

ಕೊರಗಜ್ಜ ದೈವದ ಮುಂದೆ ಯಾರ ಆಟವೂ ನಡೆಯಲ್ಲ!
ಈ ಪ್ರಕರಣದಲ್ಲಿ ಕೇವಲ ಅನಿಲ್ ಕುಮಾರ್ ಮಾತ್ರವಲ್ಲ, ಇದರ ಹಿಂದೆ ಯಾರೋ ದೊಡ್ಡ ಕೈವಾಡ ಇದೆ. ನಮ್ಮ ಜೊತೆಗೇ ಇದ್ದವರು, ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಫೋಟೋಗಳು, ರೀಲ್ಸ್‌ಗಳು ಎಲ್ಲಾ ಸಾಕ್ಷಿಯಾಗಿ ಸಬ್ಮಿಟ್ ಆಗಿವೆ. ಯಾರೋ ಕೆಲವರು ಸೇರಿಕೊಂಡು ಈ ನಾಟಕ ಆಡಿದ್ದಾರೆ, ಆದರೆ ಸತ್ಯವನ್ನ ಮುಚ್ಚಿಡೋಕೆ ಆಗಲ್ಲ. ಇವತ್ತು ನೀವು ಮೀಡಿಯಾದಿಂದ ತಪ್ಪಿಸಿಕೊಳ್ಳಬಹುದು, ಪೊಲೀಸರಿಂದ ತಪ್ಪಿಸಿಕೊಳ್ಳಬಹುದು. ಆದರೆ ನಾವು ನಂಬಿದ ಕೊರಗಜ್ಜ ದೈವದ ಮುಂದೆ ಯಾರ ಆಟವೂ ನಡೆಯಲ್ಲ. ಒಂದಲ್ಲ ಒಂದು ದಿನ ನೀವು ಸಿಕ್ಕಿಬಿದ್ದೇ ಬೀಳ್ತೀರಾ” ಅಂತ ಅನಿ ಗುಡುಗಿದ್ದಾರೆ.

ಸುಳ್ಳು ಹೇಳಿ ಸಿಕ್ಕಿಬಿದ್ದ ಅನಿಲ್ ಕುಮಾರ್ ಈಗ ಮುಂದೇನು ಮಾಡ್ತಾನೆ ಅನ್ನೋದನ್ನ ಕಾದು ನೋಡಬೇಕು!

error: Content is protected !!