
ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಮನೆಮದ್ದು ಅತ್ಯುತ್ತಮ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಸೌಂದರ್ಯವರ್ಧಕಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ ಮಿಶ್ರಣವು “ಮ್ಯಾಜಿಕ್ ಆಯಿಲ್” ಎಂದೇ ಖ್ಯಾತಿ ಪಡೆದಿದೆ. ಇದು ಚರ್ಮವನ್ನು ಮೃದುವಾಗಿಸಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.

ಪ್ರಮುಖ ಪ್ರಯೋಜನಗಳು
- ತೆಂಗಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್‌ಗಳು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತವೆ. ವಿಟಮಿನ್ ಇ ಚರ್ಮವನ್ನು ಮೃದುವಾಗಿರಿಸುತ್ತದೆ. ಇದು ಒಣ ಚರ್ಮದವರಿಗೆ ರಾಮಬಾಣ.
- ನಿಯಮಿತ ಬಳಕೆಯಿಂದ ಮುಖದ ಮೇಲಿರುವ ನಿರ್ಜೀವ ಕೋಶಗಳು ಕಡಿಮೆಯಾಗಿ, ಚರ್ಮವು ನೈಸರ್ಗಿಕವಾಗಿ ಹೊಳೆಯಲು ಆರಂಭಿಸುತ್ತದೆ.
- ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತವೆ.
- ವಿಟಮಿನ್ ಇ ಚರ್ಮವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಇದರಿಂದ ಮುಖದ ಮೇಲಿನ ಸುಕ್ಕುಗಳು ಮತ್ತು ಗೆರೆಗಳು ನಿಧಾನವಾಗಿ ಕಡಿಮೆಯಾಗಬಹುದು.
- ರಾತ್ರಿ ಮಲಗುವ ಮುನ್ನ ಒಂದು ಚಮಚ ತೆಂಗಿನ ಎಣ್ಣೆಗೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಎಣ್ಣೆಯನ್ನು ಬೆರೆಸಿ. ಮುಖಕ್ಕೆ ಲಘುವಾಗಿ ಮಸಾಜ್ ಮಾಡಿ, ಬೆಳಗ್ಗೆ ಫೇಸ್‌ವಾಶ್‌ನಿಂದ ತೊಳೆದುಕೊಳ್ಳಿ.

ಎಚ್ಚರ ವಹಿಸಬೇಕಾದ ಅಂಶಗಳು:
- ತೆಂಗಿನ ಎಣ್ಣೆಯು ಚರ್ಮದ ರಂಧ್ರಗಳನ್ನು ಮುಚ್ಚಬಹುದು. ಆದ್ದರಿಂದ ಮೊಡವೆ ಇರುವವರು ಅಥವಾ ಜಿಡ್ಡಿನ ಚರ್ಮ ಹೊಂದಿರುವವರು ಇದನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು.
- ನೇರವಾಗಿ ಮುಖಕ್ಕೆ ಹಚ್ಚುವ ಮೊದಲು ಕೈ ಅಥವಾ ಕುತ್ತಿಗೆಯ ಮೇಲೆ ಹಚ್ಚಿ ಪರೀಕ್ಷಿಸಿ
- ವಾರದಲ್ಲಿ 1-2 ಬಾರಿ ಬಳಸಿದರೆ ಸಾಕು.