ಬೆಂಗಳೂರು: ಸೌಜನ್ಯ ಹೋರಾಟದ ಮೂಲಕ ರಾಜ್ಯಾದ್ಯಂತ ಚರ್ಚೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡೀಪಾರು ಆದೇಶಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಪುತ್ತೂರು ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ (ಏ.24) ಹೈಕೋರ್ಟ್‌ನಲ್ಲಿ ನಡೆದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠದ ಮುಂದೆ ತಿಮರೋಡಿ ಪರ ವಕೀಲರು ಬಲವಾದ ವಾದ ಮಂಡಿಸಿದರು. “ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಲ್ಲ ಹೊಸ ಕ್ರಿಮಿನಲ್ ಪ್ರಕರಣಗಳು ಪೊಲೀಸರು ಗಡೀಪಾರು ಪ್ರಸ್ತಾವನೆಯ ವರದಿ ನೀಡಿದ ನಂತರವೇ ದಾಖಲಾಗಿವೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದಗಳನ್ನು ಆಲಿಸುವ ಸಂದರ್ಭದಲ್ಲಿ ನ್ಯಾಯಪೀಠವು, “ನಿಮ್ಮ ಮೇಲೆಯೇ ಪದೇ ಪದೇ ಕೇಸ್ ಯಾಕೆ ದಾಖಲಾಗುತ್ತಿವೆ? ಪೊಲೀಸರಿಗೆ ನಿಮ್ಮನ್ನು ಬಿಟ್ಟರೆ ಬೇರೆ ಯಾರೂ ಸಿಗುತ್ತಿಲ್ಲವೇ?” ಎಂದು ಪ್ರಶ್ನಿಸಿತು.

ಈಗಾಗಲೇ ಮೂರು ಬಾರಿ ಗಡೀಪಾರು ಆದೇಶ ಹೊರಡಿಸಿರುವ ಈ ಪ್ರಕರಣದಲ್ಲಿ ತಿಮರೋಡಿ ಅವರಿಗೆ ಹೈಕೋರ್ಟ್ ರಿಲೀಫ್ ನೀಡಲಿದೆಯೇ ಅಥವಾ ರಾಯಚೂರಿಗೆ ತೆರಳಬೇಕಾಗುತ್ತದೆಯೇ ಎಂಬುದು ಏಪ್ರಿಲ್ 29ರಂದು ತಿಳಿಯಲಿದೆ.