ಸುರತ್ಕಲ್ ಠಾಣೆ ಮುಂಭಾಗ ಶವವಿಟ್ಟು ಪ್ರತಿಭಟನೆ! ವ್ಯಕ್ತಿ ಆತ್ಮಹತ್ಯೆ ಹಿನ್ನೆಲೆ, ಹೆದ್ದಾರಿ ಬಂದ್!!

ಸುರತ್ಕಲ್: ಪೊಲೀಸರ ದೌರ್ಜನ್ಯದಿಂದ ಹೊಸಬೆಟ್ಟು ನಿವಾಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಉದ್ರಿಕ್ತ ಸಾರ್ವಜನಿಕರು ಪೊಲೀಸ್ ಠಾಣೆಯ ಎದುರು ಶವವಿಟ್ಟು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಈ ವೇಳೆ ಹೆದ್ದಾರಿ ತಡೆಯುಂಟಾದ ಘಟನೆ ನಡೆದಿದೆ.
ಹೊಸಬೆಟ್ಟು ನಿವಾಸಿ ಸೋಮನಾಥ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರ ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

error: Content is protected !!