
ಸುರತ್ಕಲ್: ಪೊಲೀಸರ ಕಿರುಕುಳದಿಂದ ಹೊಸಬೆಟ್ಟು ನಿವಾಸಿ ಮೀನುಗಾರ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕಾಗಮಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಉದ್ರಿಕ್ತರನ್ನು ಸಮಾಧಾನ ಪಡಿಸಿದರು.

ಬೀಚ್ ನಲ್ಲಿ ತಡರಾತ್ರಿ ಇದ್ದ ಜೋಡಿಯನ್ನು ಪ್ರಶ್ನೆ ಮಾಡಿರುವ ಕಾರಣಕ್ಕೆ ಪೊಲೀಸರು ಮೀನುಗಾರ ಸೋಮನಾಥರನ್ನು ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿರುವುದು ಸರಿಯಲ್ಲ,

ಪ್ರಕರಣದಲ್ಲಿ ಇನ್ನೂ ಮೂರು ಜನ ಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ.
ಪೊಲೀಸರು ಜೋಡಿಯನ್ನು ಕೂಡ ತನಿಖೆ ನಡೆಸಬೇಕು ಇನ್ನು ಮುಂದೆ ಮೀನುಗಾರರನ್ನು ವಶಕ್ಕೆ ಪಡೆಯುವ ಮೊದಲು ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಪೊಲೀಸರು ಇದೇ ರೀತಿ ಮುಂದುವರಿದರೆ ಇದಕ್ಕಿಂತ ಜಾಸ್ತಿ ಜನ ಸೇರುತ್ತೇವೆ ಎಂದರು. ಬಳಿಕ ಸುರತ್ಕಲ್ ಸ್ಮಶಾನದವರೆಗೆ ಕಾಲ್ನಡಿಗೆಯಲ್ಲಿ ಶಾಸಕರು ತೆರಳಿ ಅಂತಿಮ ವಿಧಿಗಳನ್ನು ನೆರವೇರಿಸಲು ನೆರವಾದರು.
