ರಸ್ತೆ ಮಧ್ಯೆ ಆಟೋ ನಿಲ್ಲಿಸಿ ಬಸ್ ಅಡ್ಡಗಟ್ಟಿದ ಆಟೋ ಚಾಲಕರು!!

ಚಿಕ್ಕಮಗಳೂರು: ಕುಡಿದ ಅಮಲಿನಲ್ಲಿ KSRTC ಬಸ್​ ಅಡ್ಡಗಟ್ಟಿ ಆಟೋ ಚಾಲಕರು ಕಿರಿಕ್ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಕೆ‌ಎಂ ರಸ್ತೆಯಲ್ಲಿ ನಡೆದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಕಡೂರಿನಿಂದ ಚಿಕ್ಕಮಗಳೂರು KSRTC ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ಗೆ ರಸ್ತೆ ಮಧ್ಯೆ ಆಟೋ ಅಡ್ಡಹಾಕಿ ಪುಂಡಾಟ ಮೆರೆಯಲಾಗಿದೆ. ಬಸ್ ಚಾಲಕ ಮನವಿ ಮಾಡಿದ್ರೂ ಜಾಗ ಬಿಡದೆ, ಬಸ್​​ಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಮೂವರು ಯುವಕರು ಕಿರಿಕ್ ಮಾಡಿದ್ದಾರೆ.

ಆಟೋ ನಿಲ್ಲಿಸಿ ಸೆಲ್ಫಿ ತೆಗೆಯುತ್ತಿರುವ ಯುವಕರ ವಿಡಿಯೋ ವೈರಲ್​ ಆಗಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!