
ಬೆಂಗಳೂರು: ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಪಬ್‌ನ ಒಳಗೆ ಯುವಕ ತಮಗೆ ತೊಂದರೆ ನೀಡಿದ್ದಾನೆ ಎಂದು ಆಕ್ರೋಶಗೊಂಡ ಯುವತಿಯರು, ಆತನನ್ನು ರಸ್ತೆಗೆ ಎಳೆದು ತಂದು ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿ, ‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಎಷ್ಟೇ ಮನವಿ ಮಾಡಿದರೂ ಕೇಳದೆ ಯುವತಿಯರು ಪೊಲೀಸರ ಎದುರಲ್ಲೇ ಯುವಕನಿಗೆ ಹೊಡೆದಿದ್ದಾರೆ.

ಈ ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಎರಡೂ ಕಡೆಯವರಿಗೂ ಪೊಲೀಸರು ದೂರು ನೀಡುವಂತೆ ಸೂಚಿಸಿದರೂ, ಈವರೆಗೆ ದೂರು ನೀಡಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಸದ್ಯ ವೈರಲ್ ವಿಡಿಯೋ ಆಧಾರದ ಮೇಲೆ ಕೋರಮಂಗಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
