ಮಂಗಳೂರು: ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸರಿಯಾದ ದಾರಿ ತೋರಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬೃಹತ್ ಶೈಕ್ಷಣಿಕ ಮೇಳ ‘EDU Connect Expo 2026’ ಆಯೋಜಿಸಲಾಗಿದೆ ಎಂದು ತುಂಬೆಜಾ ಪಬ್ಲಿಸಿಟಿ ಸಂಸ್ಥೆಯ ಸಿಇಓ ಶಕೀಲ್ ತುಂಬೆಜಾ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರಗಳನ್ನು ಹಂಚಿಕೊಂಡು, ಏಪ್ರಿಲ್ 27 ಮತ್ತು 28 ರಂದು ಮಂಗಳೂರಿನ ಪಂಪ್‌ವೆಲ್ ಸರ್ಕಲ್ ಬಳಿ ಇರುವ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಎಕ್ಸ್‌ಪೋ ನಡೆಯಲಿದೆ. ತುಂಬೆಜಾ ಪಬ್ಲಿಸಿಟಿ ಆಯೋಜಿಸಿರುವ ಈ ಮೇಳಕ್ಕೆ ಅಸ್ಟ್ರಾ ಗೋಲ್ಡ್ ಅಂಡ್ ಡೈಮಂಡ್ಸ್ (ASTRA Gold & Diamonds) ಸಹಯೋಗ ನೀಡುತ್ತಿದೆ. ಮಂಗಳೂರಿನ ಪ್ರತಿಷ್ಠಿತ 35ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, ಒಂದೇ ಸೂರಿನಡಿ 300ಕ್ಕೂ ಅಧಿಕ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ವೈವಿಧ್ಯಮಯ ಕೋರ್ಸ್‌ಗಳ ಮಾಹಿತಿ:
ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಫಾರ್ಮಸಿ, ಮ್ಯಾನೇಜ್‌ಮೆಂಟ್, ಆರ್ಟ್ಸ್ ಹಾಗೂ ವಿಜ್ಞಾನ ವಿಭಾಗದ ಕೋರ್ಸ್‌ಗಳಲ್ಲದೆ, ಕೃತಕ ಬುದ್ಧಿಮತ್ತೆ (AI), ಸೈಬರ್ ಸೆಕ್ಯೂರಿಟಿ, ಡಿಸೈನ್ ಮತ್ತು ಕ್ರಿಯೇಟಿವ್ ಫೀಲ್ಡ್, ಕಾನೂನು ಹಾಗೂ ವಿದೇಶಿ ಶಿಕ್ಷಣದ (Study Abroad) ಬಗ್ಗೆಯೂ ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ ಎಂದರು.

ವಿಶೇಷ ಆಕರ್ಷಣೆಗಳು:
ಕಾಲೇಜು ಪ್ರತಿನಿಧಿಗಳೊಂದಿಗೆ ನೇರ ಸಂವಾದಕ್ಕೆ ಅವಕಾಶವಿದೆ. ಸ್ಥಳದಲ್ಲಿಯೇ ಸಂಶಯ ಪರಿಹರಿಸಲು ʻಡೌಟ್ ಕ್ಲಿಯರಿಂಗ್’ ಮತ್ತು ಕರಿಯರ್ ಕೌನ್ಸೆಲಿಂಗ್ ವ್ಯವಸ್ಥೆದೆ. ಶೈಕ್ಷಣಿಕ ಸಾಲ (Education Loan) ಮತ್ತು ಸ್ಕಾಲರ್‌ಶಿಪ್‌ಗಳ ಬಗ್ಗೆ ಮಾಹಿತಿ, ಪ್ರೇರಣಾದಾಯಕ ಭಾಷಣಕಾರರಾದ ಸಹ್ಲಾ ಪರ್ವೀನ್ ಮತ್ತು ಡಾ. ರಾಹುಲ್ ದೇವ್‌ರಾಜ್ ಅವರಿಂದ ವಿಶೇಷ ಸೆಷನ್‌ಗಳು ನಡೆಯಲಿದೆ. ಅಲ್ಲದೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ʻParticipation Certificate’ ವಿತರಣೆ ನಡೆಯಲಿದೆ ಎಂದರು.

ಉಚಿತ ಪ್ರವೇಶ:
ಈ ಎರಡು ದಿನಗಳ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿದ್ದು, ಕ್ಯೂಆರ್ ಕೋಡ್ ಆಧಾರಿತ ನೋಂದಣಿ ವ್ಯವಸ್ಥೆ ಇರಲಿದೆ. ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮೇಳ ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಶಕೀಲ್ ತುಂಬೆಜಾ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರು ಸೇರಿದಂತೆ ಆಯೋಜಕರು ಉಪಸ್ಥಿತರಿದ್ದರು.