ಕಾವೇರಿ ನದಿ ದಡದ ಬಳಿ ಅಸ್ಥಿಪಂಜರ ಪತ್ತೆ!!

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿಯ ಬೂದಗಟ್ಟೆ ದೊಡ್ಡಿ ಸಮೀಪದ ಕಾವೇರಿ ನದಿ ದಡದ ಬಳಿ ವ್ಯಕ್ತಿಯೋರ್ವರ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜುರವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಮಾರು 50-60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಅಸ್ಥಿಪಂಜರ ಎನ್ನಲಾಗಿದೆ.

 

 

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ಮಾಡಿ, ನಂತರ ಅಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಚಾಮರಾಜನಗರದ ಸಿಮ್ಸ್ ಗೆ ರವಾನಿಸಲಾಯಿತು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ, ಸುಮಾರು ಎರಡರಿಂದ ಮೂರು ತಿಂಗಳ ಕಾಲ ಹಿಂದೆ ಸಾವನ್ನಪ್ಪಿರುಬಹುದೆಂದು ಶಂಕಿಸಿದ್ದಾರೆ.

ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಾರಸುದಾರರ ಪತ್ತೆಗೆ ಕ್ರಮ ಜರುಗಿಸಿದ್ದಾರೆ.

error: Content is protected !!