ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆಯೇ ಕಲ್ಲು ಎತ್ತಿ ಹಾಕಿ ಹತ್ಯೆ: ಆರೋಪಿ ವಶ

ಬೆಂಗಳೂರು: ಮದ್ಯಪಾನದ ನಶೆಯಲ್ಲಿ ನಡೆದ ಜಗಳ ತಾರಕಕ್ಕೆ ಹೋಗಿ ಸ್ನೇಹಿತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಆರೋಪಿಯನ್ನು ಸರ್ಜಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನ ಸಿಂಗಸದನಪಲ್ಲಿಯ ಮೋಹನ್‌ (25) ಕೊಲೆಯಾದ ಯುವಕ.

ಮೋಹನ್‌ ಗುರುವಾರ ಸಂಜೆ ಸ್ನೇಹಿತ ಮನೋಜ್‌ ಜೊತೆಗೆ ಪಾರ್ಟಿ ನಡೆಸಲು ಮಟ್ಟನಹಳ್ಳಿಯ ಕೆರೆಯ ಬಳಿ ಬಂದಿದ್ದ. ಮದ್ಯಪಾನ ಮಾಡಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋದ ಬಳಿಕ, ಸ್ಥಳದಲ್ಲಿದ್ದ ಕಲ್ಲು ತೆಗೆದುಕೊಂಡು ಮೋಹನ್‌ ಮೇಲೆ ಎತ್ತಿಹಾಕಿ ಮನೋಜ್‌ ಪರಾರಿ ಆಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮೋಹನ್‌ ಸ್ಥಳದಲ್ಲೇ ಮೃತಪಟ್ಟಿದ್ದ.

ಸದ್ಯ ಪೊಲೀಸರು ಆರೋಪಿ ಮೋಹನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!