ನಾವು 6 ಮಕ್ಕಳನ್ನು ನೀಡಿದ್ದೇವೆ, ನೀವು 3 ಮಕ್ಕಳನ್ನಾದರೂ ಪಡೆಯಿರಿ: ಪಾಕ್ ಮೂಲದ ಸೀಮಾ ಹೈದರ್!

ನವದೆಹಲಿ: ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಸಚಿನ್ ಮೀನಾ ಎಂಬುವವರನ್ನು ಮದುವೆಯಾಗಿ ಸುದ್ದಿಯಾಗಿದ್ದ ಸೀಮಾ ಹೈದರ್, ಇದೀಗ ಮತ್ತೊಂದು ಹೇಳಿಕೆಯ ಮೂಲಕ ಗಮನ ಸೆಳೆದಿದ್ದಾರೆ. ಭಾರತದಲ್ಲಿರುವ ಪ್ರತಿ ಹಿಂದೂ ಕುಟುಂಬವು ಕನಿಷ್ಠ ಎರಡರಿಂದ ಮೂರು ಮಕ್ಕಳನ್ನು ಹೊಂದಿರಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಸೀಮಾ ಹೈದರ್, “ದೇಶದಲ್ಲಿ ಅನೇಕ ಹಿಂದೂ ಕುಟುಂಬಗಳು ಕೇವಲ ಒಂದು ಅಥವಾ ಎರಡು ಮಕ್ಕಳನ್ನು ಹೊಂದಲು ಇಷ್ಟಪಡುತ್ತಿವೆ. ಇದರಿಂದಾಗಿ ಹಿಂದೂ ಜನಸಂಖ್ಯೆಯ ಪ್ರಮಾಣದಲ್ಲಿ ಕುಸಿತ ಕಂಡುಬರುತ್ತಿದೆ. ಇದು ಭವಿಷ್ಯದಲ್ಲಿ ಜನಸಂಖ್ಯಾ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಇತರ ಸಮುದಾಯಗಳಲ್ಲಿ ಜನನ ಪ್ರಮಾಣ ಹೆಚ್ಚಾಗುತ್ತಿದ್ದು, ಹಿಂದೂಗಳು ಕೂಡ ದೊಡ್ಡ ಕುಟುಂಬಗಳನ್ನು ಹೊಂದುವ ಬಗ್ಗೆ ಯೋಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನಮ್ಮದು ಆರು ಸನಾತನ ಮಕ್ಕಳ ಕುಟುಂಬತಮ್ಮ ವೈಯಕ್ತಿಕ ಜೀವನದ ಬಗ್ಗೆ ಉಲ್ಲೇಖಿಸಿದ ಅವರು, “ನಾವು ಈ ದೇಶಕ್ಕೆ ಆರು ಸನಾತನ ಮಕ್ಕಳನ್ನು ನೀಡಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.

ಸೀಮಾ ಹೈದರ್ ಅವರಿಗೆ ಮೊದಲ ಪತಿಯಿಂದ ನಾಲ್ಕು ಮಕ್ಕಳಿದ್ದು, ಸಚಿನ್ ಮೀನಾ ಅವರೊಂದಿಗೆ ವಿವಾಹವಾದ ಬಳಿಕ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅವರು ತಮ್ಮ ಆರನೇ ಮಗುವಿಗೆ ಜನ್ಮ ನೀಡಿದ್ದು, ಇತ್ತೀಚೆಗಷ್ಟೇ ಮಗುವಿಗೆ ʻಭಾರತ್’ ಎಂದು ನಾಮಕರಣ ಮಾಡಿದ್ದರು.

ಸೀಮಾ ಹೈದರ್ ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಪಾಕ್ ಮೂಲದ ಮಹಿಳೆಯಿಂದ ಇಂತಹ ಹೇಳಿಕೆ ಬಂದಿರುವುದು ಸಂಚಲನ ಮೂಡಿಸಿದೆ.

error: Content is protected !!