ತುಳು ಸಿನಿಮಾ ನಿರ್ದೇಶಕ ಸೂರಜ್ ಬೋಳಾರ್ ಇನ್ನಿಲ್ಲ

ಬೆಂಗಳೂರು: ತುಳು ಚಿತ್ರರಂಗದ ಯುವ ನಿರ್ದೇಶಕ ಸೂರಜ್ ಬೋಳಾರ್ ಅವರು ನಿಧನರಾಗಿದ್ದಾರೆ.
ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿರುವ ಸೂರಜ್ ಬೋಳಾರ್ ಅವರು ತುಳುವಿನಲ್ಲಿ ಪತ್ತಿಸ್ ಗ್ಯಾಂಗ್ ಹಾಗೂ ಕನ್ನಡದಲ್ಲಿ ರಾಹುಕಾಲ ಗುಳಿಗಕಾಲ ಸಿನಿಮಾ ನಿರ್ದೇಶಿಸಿದ್ದರು. ಅವರು ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.
ಸೂರಜ್ ಬೋಳಾರ್ ಅವರ ನಿಧನಕ್ಕೆ ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!