
ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ದ.ಕ ಜಿ ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಜಂಟಿ ಆಶ್ರಯದಲ್ಲಿ 122ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ನವೆಂಬರ್ 21ರಂದು ಶಾಲಾ ಸಭಾಂಗಣದಲ್ಲಿ ಮುಖ್ಯೋಪಾಧ್ಯಾಯರಾದರು ಶ್ರೀಮತಿ ಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಮುಖ್ಯ ಸಂಪನ್ಮೂಲ ಅತಿಥಿಯಾಗಿ ಹಿರಿಯ ಲೇಖಕರು ಎನ್ ಸುಬ್ರಯ ಭಟ್ ಮಾತನಾಡುತ್ತಾ ಮಕ್ಕಳು ಪ್ರಾಸ ಬದ್ಧವಾಗಿ ಬರೆದರೆ ಬಹಳ ಒಳ್ಳೆಯದು. ಬರೆಯುವುದರಿಂದ ಮಕ್ಕಳ ಜ್ಞಾನ ವೃತ್ತಿಯಾಗುತ್ತದೆ ಎಂದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ವಿಶ್ರಾಂತ ಶಿಕ್ಷಕಿ ಹಾಗೂ ಲೇಖಕಿ ಸುಧಾ ನಾಗೇಶ್ ಮಾತನಾಡುತ್ತ ಮಕ್ಕಳು ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಅವರಿಗೆ ಪರೀಕ್ಷೆ ಬರೆಯಲು ಕೂಡ ಬಹಳ ಸುಲಭವಾಗಿವಾಗುತ್ತದೆ .ಮೊಬೈಲ್ ನೋಡುವ ಚಟದಿಂದ ಹೊರಬರಲು ಸಾಹಿತ್ಯ ಓದು ಸಹಾಯ ಮಾಡುತ್ತದೆ ಎಂದರು. ಉದ್ಯಮಿ ಅಶೋಕನಗರ ಬಂಟರ ಸಂಘದ ಅಧ್ಯಕ್ಷರಾದ ಸುಧಾಕರ ಆಳ್ವ ಕಾರ್ಯಕ್ರಮ ಶುಭ ಹಾರೈಸಿದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಶಿಕ್ಷಕಿ ಲೇಖಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.