ಆಸ್ತಿಗಾಗಿ ಪತ್ನಿಯನ್ನು ಕುತ್ತಿಗೆ ತುಳಿದು ಹ*ತ್ಯೆಗೈದ ಪತಿ!!

ಬೆಂಗಳೂರು: ಊರಿನಲ್ಲಿ ರಾಜಕೀಯ ಭವಿಷ್ಯ ರೂಪಿಸಲು ಪತ್ನಿ ಅಡ್ಡಿಯಾಗಿದ್ದಕ್ಕೆ ಕುತ್ತಿಗೆ ತುಳಿದು ಪತ್ನಿ ಹತ್ಯೆಯನ್ನು ಮಾಡಿರುವ ಘಟನೆ ಇತ್ತೀಚೆಗೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಅಥಣಿ ಮೂಲದ ದನಿಯಪ್ಪ ತನ್ನ ಪತ್ನಿಯನ್ನೇ ಹತ್ಯೆಗೈದಿರುವ ಆರೋಪಿ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ದನಿಯಪ್ಪ 15 ವರ್ಷಗಳ ಹಿಂದೆ ಕಾವ್ಯಾಳನ್ನು ಮದುವೆಯಾಗಿದ್ದು, ಇಬ್ಬರ ಮಕ್ಕಳ ಸಮೇತ ನಾಗಸಂದ್ರದ ರುಕ್ಮೀಣಿ ನಗರದಲ್ಲಿ ವಾಸವಾಗಿತ್ತು. ಏ.2ರಂದು ದಂಪತಿ ಮಧ್ಯೆ ಜಗಳವಾಗಿತ್ತು. ಈ ವೇಳೆ ಆರೋಪಿ ದನಿಯಪ್ಪ ಕಾಲಿನಿಂದ ಪತ್ನಿಯ ಕುತ್ತಿಗೆ ತುಳಿದು ಹತ್ಯೆ ಮಾಡಿದ್ದ ಎನ್ನಲಾಗಿದೆ.

ಆರೋಪಿ ದನಿಯಪ್ಪ ಗುತ್ತಿಗೆದಾರನಾಗಿ ಕೋಟ್ಯಂತರ ರೂ. ಸಂಪಾದನೆ ಮಾಡಿದ್ದಾನೆ. ಆದರೂ ಪೀಣ್ಯದಲ್ಲಿ ಪತ್ನಿ ಮತ್ತು ತಾಯಿ ಹೆಸರಿನಲ್ಲಿದ್ದ 3-4 ಕೋಟಿ ರೂ. ಮೌಲ್ಯದ ಆಸ್ತಿ ಮೇಲೆ ಆಸೆ ಇತ್ತು. ಅದನ್ನು ಮಾರಿ ಅಥಣಿಗೆ ಹೋಗಿ, ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸಿದ್ಧತೆ ನಡೆಸಿದ್ದ. ಆದರೆ, ಪತ್ನಿ ಆಸ್ತಿ ಮಾರಾಟಕ್ಕೆ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಅಲ್ಲದೆ, ಕೃತ್ಯಕ್ಕೂ ಎರಡು ದಿನಗಳ ಮೊದಲು ತನ್ನ ಊರಿಗೆ ಹೋಗಿ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ ಏರ್ಪಡಿಸಿದ್ದ. ಅಲ್ಲಿಯೇ ರಾಜಕೀಯ ಭವಿಷ್ಯ ಸೃಷ್ಟಿಸಿಕೊಳ್ಳಬಹುದು ಎಂದು ನಿರ್ಧರಿಸಿದ್ದ. ಆದರೆ, ಪತ್ನಿ ಆಸ್ತಿ ಮಾರಾಟಕ್ಕೆ ಹಿಂದೇಟು ಹಾಕಿದ್ದರಿಂದ ಆಕೆಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ. ಅದರಂತೆ ಏ.2ರಂದು ಮನೆಯಲ್ಲಿ ಜಗಳ ತೆಗೆದು ಪತ್ನಿಯ ಕುತ್ತಿಗೆ ಮೇಲೆ ಕಾಲು ಇರಿಸಿ ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!