ಗಾನಕೋಗಿಲೆ ಎಸ್.ಜಾನಕಿ ವಿಧಿವಶ!

ಮೈಸೂರು: ಗಾನಕೋಗಿಲೆ ಹಿರಿಯ ಗಾಯಕಿ ಎಸ್.ಜಾನಕಿ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಎಸ್‌.ಜಾನಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. “ದಕ್ಷಿಣ ಭಾರತದ ‘ಗಾನಕೋಗಿಲೆ’ ಎಂದೇ ಪ್ರಖ್ಯಾತರಾದ ದಂತಕಥೆ, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಈಗ 88 ವರ್ಷ ವಯಸ್ಸಾಗಿತ್ತು. 1938 ಏಪ್ರಿಲ್‌ 23 ರಂದು ಜನಿಸಿದ್ದ ಎಸ್‌. ಜಾನಕಿ, ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಮನೆಮಾತಾಗಿದ್ದರು. ತಮ್ಮ ಸುದೀರ್ಘ ಗಾಯನ ಜೀವನದಲ್ಲಿ ಅವರು. ಬರೋಬ್ಬರಿ 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಅಮರ ಗೀತೆಗಳಿಗೆ ದನಿಯಾಗಿದ್ದರು.


ಎಸ್‌.ಜಾನಕಿ ಅವರಿಗೆ ಈವರೆಗೂ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ವಿವಿಧ ರಾಜ್ಯಗಳಿಂದ 33 ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬಹುಮುಖ ಪ್ರತಿಭೆಯ ಗಾಯಕಿಯಾಗಿ ವ್ಯಾಪಕವಾಗಿ ಅವರು ಮೆಚ್ಚುಗೆ ಪಡೆದಿದ್ದರು.

error: Content is protected !!