ಏ. 29, 30: ನಂತೂರಿನಲ್ಲಿ ‘ಪದುವಾ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿ

ಮಂಗಳೂರು: ನಗರದ ನಂತೂರಿನಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ʻಪದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ʼ ತನ್ನ ಬಹುನಿರೀಕ್ಷಿತ ಕ್ರೀಡಾ ಸಂಭ್ರಮವಾದ ʻಪದುವಾ ಪ್ರೀಮಿಯರ್ ಲೀಗ್’ (Padua Premier Legue- PPL)ನ 6ನೇ ಆವೃತ್ತಿ(Season 6)ನ್ನು ಘೋಷಿಸಿದೆ.

ಈ ರೋಚಕ ಕ್ರಿಕೆಟ್ ಪಂದ್ಯಾವಳಿಯು ಇದೇ ಏಪ್ರಿಲ್ 29 ಮತ್ತು 30ರಂದು ಎರಡು ದಿನಗಳ ಕಾಲ ಪದುವಾ ಮೈದಾನ(Padua Ground)ದಲ್ಲಿ ಜರುಗಲಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸಲು ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಸೀಸನ್ 6ರಲ್ಲಿ ವಿವಿಧ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಪಂದ್ಯಾವಳಿಯ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಆಟಗಾರರ ಮತ್ತು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಕ್ರಿಕೆಟ್ ಪ್ರೇಮಿಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

error: Content is protected !!