ಕಲಾಚಂದಿರ ಕಲಾಮಂದಿರ ಟ್ರಸ್ಟ್‌ನಿಂದ ಉಳ್ಳಾಲ ರಾಣಿ ಅಬ್ಬಕ್ಕ ದೇವಿ ಕ್ಷೇತ್ರದ ಪ್ರವಾಸ: ಮಳಲಿಯಲ್ಲಿ ಪ್ರೊ. ಅಕ್ಷಯ ಕುಮಾರ್‌ಗೆ ಗೌರವ

ಮಂಗಳೂರು: ಹಿಂದೆ ವಿನೋದ ಸಾಹಿತ್ಯ ವೇದಿಕೆ (ರಿ.) ಎಂದು ಗುರುತಿಸಲ್ಪಡುತ್ತಿದ್ದ, ಪ್ರಸ್ತುತ ಕಲಾಚಂದಿರ ಕಲಾಮಂದಿರ ಟ್ರಸ್ಟ್ (ರಿ.), ಬೆಂಗಳೂರು ಸಂಸ್ಥೆಯ ವತಿಯಿಂದ, ಅದರ ಅಧ್ಯಕ್ಷರಾದ ಬಿ. ಶಾಂತಕುಮಾರ್ ರವರ ದಕ್ಷ ಸಾರಥ್ಯದಲ್ಲಿ, ಉಳ್ಳಾಲ ರಾಣಿ ಅಬ್ಬಕ್ಕ ದೇವಿ ಕ್ಷೇತ್ರಕ್ಕೆ ಎರಡು ದಿನಗಳ ವಿಶೇಷ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರವಾಸವು ಏಪ್ರಿಲ್ 3 ಮತ್ತು 4, 2026 ರಂದು ನಡೆಯಿತು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಈ ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ, ತಂಡವು ರಾಣಿ ಅಬ್ಬಕ್ಕ ದೇವಿಯ ತವರೂರು ಮಳಲಿ(ಮಣೇಲ್)ಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ, ಕಲಾಮಂದಿರ ಕಲಾಮಂದಿರ ಟ್ರಸ್ಟ್ (ರಿ.), ಬೆಂಗಳೂರು ವತಿಯಿಂದ, ಮಣೇಲ್ ರಾಣಿ ಅಬ್ಬಕ್ಕ ಚಾವಡಿಯ ಮುಖ್ಯಸ್ಥರಾದ ಪ್ರೊ. ಅಕ್ಷಯ ಕುಮಾರ್ ಮಳಲಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅತ್ಯಂತ ಗೌರವದಿಂದ ಸತ್ಕರಿಸಲಾಯಿತು.

ರಾಣಿ ಅಬ್ಬಕ್ಕ ದೇವಿಯ ವೀರಗಾಥೆ ಮತ್ತು ಇತಿಹಾಸವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಪ್ರವಾಸವು ಅತ್ಯಂತ ಮಹತ್ವದ್ದಾಗಿದೆ. ಪೋರ್ಚ್‌ಗೀಸರನ್ನು ಸದೆಬಡಿದ ಉಳ್ಳಾಲ ರಾಣಿ ಅಬ್ಬಕ್ಕ ದೇವಿಯ ಕಾರ್ಯಕ್ಷೇತ್ರ ಉಳ್ಳಾಲವಾಗಿದ್ದರೂ, ಆಕೆ ನೆಲೆಸಿದ್ದು ತನ್ನ ಹುಟ್ಟೂರದ ಮಳಲಿಯಲ್ಲಿ ಎನ್ನುವುದು ವಿಶೇಷ. ಜನಸಾಮಾನ್ಯರಂತೆ ಬದುಕಿದ್ದ ರಾಣಿ ಅಬ್ಬಕ್ಕ ಇಲ್ಲಿ ಭತ್ತದ ಕೃಷಿ ಮಾಡುತ್ತಿದ್ದಳು. ಈಕೆಯನ್ನು ಇಟಲಿ ಪ್ರವಾಸಿ ಪಿಯಾತ್ರೋ ಡಲ್ಲಾವ್ಯಾಲೆ ಮಳಲಿಯಲ್ಲಿ ಭೇಟಿ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಬ್ಬಕ್ಕನ ಕುರಿತ ಸಾಕಷ್ಟು ಮಾಹಿತಿಗಳನ್ನು ಪ್ರೊ. ಅಕ್ಷಯ ಕುಮಾರ್ ಅವರು ತಮ್ಮನ್ನು ಭೇಟಿ ಮಾಡಿದ ಸಂಸ್ಥೆಗೆ ಒದಗಿಸಿದರು.

error: Content is protected !!