ಜೆ.ಇ.ಇ ಮೈನ್ಸ್ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ವೈರಲ್‌ ಮಾಡಲು ಯತ್ನಿಸಿದ ವಿದ್ಯಾರ್ಥಿ!

ಮಣಿಪಾಲ: ಜೆ.ಇ.ಇ ಮೈನ್ಸ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೋರ್ವ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವೈರಲ್ ಮಾಡಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ಭಾನುವಾರ(ಏ.05) ನಡೆದಿದೆ.

ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪ್ರಶ್ನೆ ಪತ್ರಿಕೆ ಪ್ರಸಾರ ಮಾಡಲು ಯತ್ನಿಸಿದ ಆರೋಪಿ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಏ.5ರಂದು ಟಿಎಂಎ ಪೈ ಪೊಲಿಟೆಕ್ನಿಕ್ ಕಾಲೇಜಿನಲ್ಲಿ ಜೆ.ಇ.ಇ ಮೈನ್ಸ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಒಳಗೆ ಬರುವ ವಿದ್ಯಾರ್ಥಿಯವರಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೆಟ್ ತೆಗೆದುಕೊಂಡು ಬರಲು ಅನುಮತಿ ಇರುತ್ತದೆ. ಪರೀಕ್ಷೆ ಬರೆಯಲು ಬಂದಿದ್ದ ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಲ್ಯಾಬ್ ಎ ಕೇಂದ್ರದ ಸಿಸ್ಟಮ್ ಸಿ-018 ರಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ. ಆತ ಮೊಬೈಲ್ ಪೋನ್ ಬಳಸಿ ಪರೀಕ್ಷಾ ಹಾಲ್ ನಲ್ಲಿ ಕಂಪ್ಯೂಟರ್ ಸಿಸ್ಟಂನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ.

ಈ ಬಗ್ಗೆ ಅರೀದಮಾನ್ ಸಿಂಗ್ ವಿರುದ್ದ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!