ʻಸೈಜ್ʼ ಕೇಳಿದ ಕಿಡಿಗೇಡಿಗೆ ʻಕೇರಳ ಸ್ಟೋರಿʼ ಬೆಡಗಿ ಕೊಟ್ಟ ರಿಟರ್ನ್‌ ಗಿಫ್ಟ್‌ ವೈರಲ್!

 

ಮುಂಬೈ: ʻದಿ ಕೇರಳ ಸ್ಟೋರಿ’ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಟಿ ಅದಾ ಶರ್ಮಾ ಈಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಯೊಬ್ಬನ ಬಾಯಿ ಮುಚ್ಚಿಸಿ ಸುದ್ದಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ʻಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸುತ್ತಿದ್ದ ನಟಿಗೆ ಎದುರಾದ ಆ ಒಂದು ಅಸಭ್ಯ ಪ್ರಶ್ನೆಗೆ ಅದಾ ನೀಡಿದ ಉತ್ತರ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

adah sharma

ಚಾಟ್ ಸೆಷನ್ ವೇಳೆ ಕಿಡಿಗೇಡಿಯೊಬ್ಬ ಅದಾ ಶರ್ಮಾ ಅವರ ದೇಹದ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿ, “ನಿಮ್ಮ ಸೈಜ್ ಎಷ್ಟು?” ಎಂದು ಕೇಳಿದ್ದನು. ಪ್ರಶ್ನೆಯ ಹಿಂದಿನ ದುರುದ್ದೇಶವನ್ನು ತಕ್ಷಣವೇ ಅರಿತ ಅದಾ ಶರ್ಮಾ, ಕಿಂಚಿತ್ತೂ ಹಿಂಜರಿಯದೆ ತಕ್ಷಣವೇ ತನ್ನ ಸ್ಯಾಂಡಲ್‌ಗಳ ಫೋಟೋ ತೋರಿಸಿ, “ಸೈಜ್ 9, ಇದು ನನ್ನ ಸ್ಯಾಂಡಲ್ ಸೈಜ್!” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈ ಮೂಲಕ ಅಸಭ್ಯವಾಗಿ ವರ್ತಿಸಿದವನಿಗೆ ತಕ್ಕ ಪಾಠ ಕಲಿಸಿದ್ದಾರೆ.

Adah Sharma reveals the one quality she wants most in an ideal partner

ಸಾಮಾನ್ಯವಾಗಿ ಇಂತಹ ಮುಜುಗರದ ಪ್ರಶ್ನೆಗಳು ಎದುರಾದಾಗ ಸೆಲೆಬ್ರಿಟಿಗಳು ಮೌನಕ್ಕೆ ಶರಣಾಗುತ್ತಾರೆ ಅಥವಾ ಆ ಪ್ರಶ್ನೆಯನ್ನು ಬಿಟ್ಟುಬಿಡುತ್ತಾರೆ. ಆದರೆ ಅದಾ ಶರ್ಮಾ ಮಾತ್ರ ಹಾಗೆ ಮಾಡದೆ, ತನಗೆ ತೊಂದರೆ ಕೊಡಲು ಬಂದವನಿಗೆ ತನ್ನದೇ ಸ್ಟೈಲ್‌ನಲ್ಲಿ ರಿಟರ್ನ್ ಗಿಫ್ಟ್ ನೀಡಿದ್ದಾರೆ. ಸದ್ಯ ಅದಾ ಶರ್ಮಾ ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಿನಿಮಾಗಳ ವಿಚಾರಕ್ಕೆ ಬಂದರೆ, ಅದಾ ಶರ್ಮಾ ಸದ್ಯ ‘ಸೂಪರ್ ವೆಲ್ಲಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜೇಶ್ ಬಚ್ಚನ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ ಮತ್ತು ಸೂಪರ್ ಹೀರೋ ಎಂಬ ಎರಡು ಶಕ್ತಿಶಾಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಈ ಸಿನಿಮಾ ಸದ್ಯ ಚಿತ್ರೀಕರಣದ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.

ಚಿತ್ರರಂಗದಲ್ಲಿ ತನ್ನದೇ ಆದ ದಾರಿ ಕಂಡುಕೊಂಡಿರುವ ಅದಾ ಶರ್ಮಾ, ರಿಯಲ್ ಲೈಫ್‌ನಲ್ಲೂ ತಾನೊಬ್ಬ ‘ಸೂಪರ್ ವುಮನ್’ ಎಂಬುದನ್ನು ಈ ಘಟನೆಯ ಮೂಲಕ ಸಾಬೀತುಪಡಿಸಿದ್ದಾರೆ. ಅಸಭ್ಯ ಪ್ರಶ್ನೆ ಕೇಳುವ ಮುನ್ನ ಹತ್ತು ಬಾರಿ ಯೋಚಿಸಿ ಎನ್ನುವುದೇ ಈ ಸ್ಯಾಂಡಲ್ ಉತ್ತರದ ಸಾರಾಂಶ!

 

 

 

error: Content is protected !!