ಬಂಡೆಗೆ ಅಪ್ಪಳಿಸಿದ ಮಿಲಿಟರಿ ಸಾರಿಗೆ ವಿಮಾನ; 29 ಮಂದಿ ಮೃತ್ಯು

ಮಾಸ್ಕೋ: ರಷ್ಯಾದ ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದ್ದು, ಅದರಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ.

ಸಂಪರ್ಕ ಕಳೆದುಕೊಂಡಿದ್ದ ಈ ವಿಮಾನವು 2014 ರಲ್ಲಿ ರಷ್ಯಾ ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡ ಕಪ್ಪು ಸಮುದ್ರ ಬಳಿಯ ದ್ವೀಪದಲ್ಲಿ ಪತನಗೊಂಡಿದೆ. 23 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ. ವಿಮಾನದಲ್ಲಿದ್ದ ಯಾರೂ ಬದುಕುಳಿದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ತಾಂತ್ರಿಕ ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆ ಬಗ್ಗೆ ರಷ್ಯಾದ ರಕ್ಷಣಾ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಶೋಧ ಮತ್ತು ರಕ್ಷಣಾ ತಂಡವು ವಿಮಾನ ಪತನವಾದ ಸ್ಥಳವನ್ನು ಪತ್ತೆಹಚ್ಚಿದೆ.

ಅಪಘಾತದ ಕಾರಣವನ್ನು ತನಿಖೆ ಮಾಡಲು ಮಿಲಿಟರಿ ಆಯೋಗವನ್ನು ಕಳುಹಿಸಲಾಗಿದೆ.

error: Content is protected !!