ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವರ್ಸಸ್ ಲಕ್ನೋ ಸೂಪರ್ ಜೈಂಟ್ಸ್‌

ಲಕ್ನೋ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL)ನ ಇಂದಿನ(ಎ.1) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಆತಿಥೇಯ ಲಕ್ನೋ ಸೂಪರ್‌ ಜೈಂಟ್ಸ್‌ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೂ ಇದು ಆವೃತ್ತಿಯ ಮೊದಲ ಪಂದ್ಯವಾದ್ದರಿಂದ ಶುಭಾರಂಭಕ್ಕಾಗಿ ಹೋರಾಡಲಿವೆ.

ರಿಷಭ್‌ ಪಂತ್‌ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ತಂಡ 14ರಲ್ಲಿ 6 ಪಂದ್ಯಗಳನ್ನಷ್ಟೇ ಗೆದ್ದು 7ನೇ ಸ್ಥಾನ ಪಡೆದಿತ್ತು. ಇನ್ನು ಆಲ್‌ರೌಂಡರ್‌ ಅಕ್ಷರ್ ಪಟೇಲ್‌ ನಾಯಕತ್ವದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ಬಾರಿ 14ರಲ್ಲಿ 7 ಪಂದ್ಯಗಳನ್ನು ಗೆದ್ದು 5ನೇ ಸ್ಥಾನ ಪಡೆದಿತ್ತು.

ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿ ಲಕ್ನೋ ಮತ್ತು ಡೆಲ್ಲಿ ಎರಡೂ ತಂಡಗಳಿವೆ. ಹೀಗಾಗಿ ಆರಂಭಿಕ ಪಂದ್ಯದಲ್ಲೇ ಗೆಲ್ಲುವ ಮೂಲಕ ಚೊಚ್ಚಲ ಕಪ್‌ನ ಸನಿಹಕ್ಕೆ ತೆರಳುವ ಗುರಿಯನ್ನು ಎರಡೂ ತಂಡಗಳು ಇಟ್ಟುಕೊಂಡಿವೆ.

ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ ಒಟ್ಟು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಲಕ್ನೋ 3 ಬಾರಿ, ಡೆಲ್ಲಿ ಕ್ಯಾಪಿಟಲ್ಸ್‌ 4 ಬಾರಿ ಗೆದ್ದಿದೆ.

ಸಂಭಾವ್ಯ ತಂಡಗಳು

ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಐಡನ್‌ ಮಾರ್ಕ್‌ರಮ್‌, ರಿಷಭ್ ಪಂತ್ (ನಾಯಕ, ವಿ.ಕೀ.), ನಿಕೋಲಸ್ ಪೂರನ್, ಆಯುಷ್ ಬದೋನಿ, ಅಬ್ದುಲ್ ಸಮದ್, ಎನ್ರಿಚ್ ನೋರ್ಜೆ, ಮೊಹಮ್ಮದ್ ಶಮಿ, ಆವೇಶ್ ಖಾನ್, ಮಾಯಾಂಕ್ ಯಾದವ್, ದಿಗ್ವೇಶ್ ರಾಥಿ.

ಡೆಲ್ಲಿ ಕ್ಯಾಪಿಟಲ್ಸ್ : ಪತುಮ್ ನಿಸ್ಸಂಕ, ಕೆ.ಎಲ್.ರಾಹುಲ್ (ವಿ.ಕೀ.), ನಿತೀಶ್ ರಾಣಾ, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್‌ ಪಟೇಲ್ (ನಾಯಕ), ಆಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಅಕೀಬ್ ನಬಿ, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ.

error: Content is protected !!