ಬೆಳ್ತಂಗಡಿ: ಹಸೆಮಣೆ ಏರಿದ ಒಂದೇ ತಿಂಗಳಲ್ಲಿ ಯುವ ಉದ್ಯಮಿ ಆತ್ಮಹತ್ಯೆ!!

ಬೆಳ್ತಂಗಡಿ: ಕಳೆದ ತಿಂಗಳಷ್ಟೇ ಹಸೆಮಣೆ ಏರಿದ್ದ ಯುವ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ(ಮಾ.29) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪುತ್ತೂರು ತಾಲೂಕಿನ ನೆಲ್ಯಾಡಿ ಮೂಲದ ಪ್ರಸ್ತುತ ಬೆಳ್ತಂಗಡಿಯ ಲಾಯಿಲ ಗ್ರಾಮದ ಬಿ. ಸುದೀಪ್ ರೈ(36) ಮೃತ ಯುವ ಉದ್ಯಮಿ.

ಸುದೀಪ್ ರೈ ಅವರು ಪುತ್ತೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಕಳ ತಾಲೂಕಿನ ಕಾಜೆ ನಿವಾಸಿಯನ್ನ ಫೆಬ್ರವರಿ 17 ರಂದು ಕುಟುಂಬದವರಿಗೆ ತಿಳಿಸದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮಾ.17 ರಂದು ಸುದೀಪ್ ರೈ ಪತ್ನಿಯ ಮನೆಯಲ್ಲಿ ಆಹಾರದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ಭಾನುವಾರ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

error: Content is protected !!