ಹಳ್ಳಕ್ಕೆ ಬಿದ್ದ ಖಾಸಗಿ ಬಸ್‌: ಇಬ್ಬರ ಕಾಲು ಮುರಿತ, ಹಲವರಿಗೆ ಗಾಯ

ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳಕ್ಕೆ ಬಿದ್ದು ಅನೇಕ ಮಂದಿಗೆ ತೀವ್ರ ಗಾಯಗೊಂಡ ಘಟನೆ ಇಂದು(ಮಾ.30) ನಡೆದಿದೆ.

ಘಟನೆಯಲ್ಲಿ ಇಬ್ಬರ ಕಾಲು ಮುರಿದಿದ್ದು, ಅದೃಷ್ಟಾವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೇಹಳ್ಳ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಬಸ್‌ನಲ್ಲಿ 35 ಜನರಿದ್ದು ಮೂರ್ನಾಲ್ಕು ಜನರಿಗೆ ತೀವ್ರ ಪೆಟ್ಟಾಗಿದ್ದು ಇಬ್ಬರ ಕಾಲು ತುಂಡಾಗಿದೆ. ಬಸ್‌ ಚಾಲಕನಿಗೂ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಸ್ಥರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!