ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದಿಂದ ಮಹಿಳಾ ದಿನಾಚರಣೆ; ಪೋಷಕರಿಗೆ ಕ್ರೀಡಾ ಸ್ಪರ್ಧೆ

ಹಳೆಯಂಗಡಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ ಹಾಗೂ ಕಿಶೋರ-ಕಿಶೋರಿ ಸಂಘದ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾ.22 ರಂದು ಅಪರಾಹ್ನ 3.30ಕ್ಕೆ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ, ಮೊಗವೀರ ಮಹಿಳಾ ಸಭಾ ಸಸಿಹಿತ್ಲು ಅಧ್ಯಕ್ಷರೂ ಆದ ಶ್ರೀಮತಿ ಸವಿತಾ ಅವರು ವಹಿಸಿದ್ದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಪ್ರಗತಿಯ ಕಡೆ ಸಾಗುತ್ತಿರುವುದು ಸಮಾನತೆಗೆ ಅಡಿಪಾಯ ಹಾಕಿದಂತಾಗಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಯುವಕ ಮತ್ತು ಯುವತಿ ಮಂಡಲದ ನಿರಂತರ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವ್ಯವಸ್ಥಿತವಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಿಶೋರ-ಕಿಶೋರಿ ಸಂಘದ ವಿದ್ಯಾರ್ಥಿಗಳ ಪೋಷಕರಿಗೆ ಒಳಾಂಗಣ ಕ್ರೀಡೆಯನ್ನು ಆಡಿಸಲಾಯಿತು ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ಕಿರಣ್ ರಾಜ್, ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಮತ್ತು ಯುವತಿ ಮಂಡಲದ ಅಧ್ಯಕ್ಷೆ ನಿರ್ಮಿತ ಉಪಸ್ಥಿತರಿದ್ದರು.

 

ಕಾರ್ಯಕ್ರಮದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ನಿರ್ಮಿತ ಸ್ವಾಗತಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ನಿಶ್ಮಿತಾ ವಾಚಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ದಿವ್ಯಶ್ರೀ ರಮೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನಿಶಾ ವಂದಿಸಿದರು.

ಕಾರ್ಯಕ್ರಮದಲ್ಲಿ ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

error: Content is protected !!