ನಿಯಂತ್ರಣ ತಪ್ಪಿ ಓಮ್ನಿ ವ್ಯಾನ್ ಮರಕ್ಕೆ ಡಿಕ್ಕಿ; 12 ಅಡಿ ಹೊಂಡಕ್ಕೆ ಪಲ್ಟಿ

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು 12 ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ಕಾಸರಗೋಡು ಬದಿಯಡ್ಕ ಸಮೀಪದ ನವಕಾನ ಎಂಬಲ್ಲಿ ನಡೆದಿದೆ.

ವಿದ್ಯಾಗಿರಿ ಬಜೆಯ ಸತ್ಯನಾರಾಯಣ ಭಟ್(69) ಗಾಯಾಳು ಚಾಲಕ.

ತಪಾಸಣೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಸ್ಥಳೀಯರು ಗಮನಿಸಿ ಸತ್ಯನಾರಾಯಣ ಭಟ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಮೂಲಕ ವ್ಯಾನನ್ನು ಮೇಲಕ್ಕೆತ್ತಿದರು.

error: Content is protected !!