ಸಿಲಿಂಡರ್ ಸ್ಪೋಟಕ್ಕೆ 1ಅಂತಸ್ತಿನ ಮನೆ ಕುಸಿತ; ಬಾಲಕಿ ಸಾವು, ನಾಲ್ವರಿಗೆ ಗಾಯ

ಕೋಲಾರ: ಸಿಲಿಂಡರ್ ಸ್ಪೋಟಗೊಂಡು ಒಂದು ಅಂತಸ್ತಿನ ಮನೆ ಕುಸಿತಗೊಂಡು ಮನೆಯಲ್ಲಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ನಾಲ್ವರಿಗೆ ಗಾಯವಾದ ಘಟನೆ ಜಿಲ್ಲೆಯ ಮುಳಬಾಗಿಲು ನಗರದ ಜಹಾಂಗಿರ್ ಮೊಹಲ್ಲಾದಲ್ಲಿ ಇಂದು(ಮಾ.25) ನಡೆದಿದೆ.

ಸುಹೇಲ್-ಕೌಸರ್ ದಂಪತಿಯ ಪುತ್ರಿ ಮಾಹಿನ್ (12) ಸಾವನ್ನಪಿದ ಬಾಲಕಿ. ಮನೆಯಲ್ಲಿದ್ದ ಸುಹೇಲ್, ಕೌಸರ್, ಉಜೇರ್, ಆಯನ್ ಎಂಬ ನಾಲ್ವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಇಂದು ಬೆಳಗ್ಗೆ 5.30ರ ವೇಳೆಗೆ ಅಡುಗೆಗೆ ಗ್ಯಾಸ್ ಹಚ್ಚಿದಾಗ ಸಿಲಿಂಡರ್ ಸ್ಪೋಟಗೊಂಡಿದ್ದು, ಸಿಲಿಂಡರ್ ಸ್ಪೋಟದ ರಭಸಕ್ಕೆ ಮನೆ ಕುಸಿದಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.

ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!