ಬಡ ಕುಟುಂಬಗಳ ಮದುವೆಗೆ ₹25 ಲಕ್ಷ ನೆರವು: 100 ಕುಟುಂಬಗಳಿಗೆ ಇನಾಯತ್ ಅಲಿ ಅವರಿಂದ ಮಾನವೀಯ ಕೊಡುಗೆ

‘ದೀಪಾವಳಿ ಜ್ಯೋತಿ ಪರ್ವ’ ಕಾರ್ಯಕ್ರಮದ ಅಂಗವಾಗಿ ಇನಾಯತ್ ಅಲಿ ಅವರು ಸಮಾಜಮುಖಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಿದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ 100 ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಯ ಖರ್ಚಿಗೆ ನೆರವಾಗುವ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ತಲಾ ₹25,000ರಂತೆ ಒಟ್ಟು ₹25 ಲಕ್ಷ ಆರ್ಥಿಕ ಸಹಾಯವನ್ನು ವಿತರಿಸಿದರು.

ಹಬ್ಬದ ಸಂಭ್ರಮದ ನಡುವೆ ನೂರು ಕುಟುಂಬಗಳ ಬದುಕಿನಲ್ಲಿ ಸಂತಸದ ಬೆಳಕು ಮೂಡಿಸಿದ ಈ ಮಾನವೀಯ ಕಾರ್ಯವು ಕಾರ್ಯಕ್ರಮದ ಅತ್ಯಂತ ಅರ್ಥಪೂರ್ಣ ಕ್ಷಣವಾಗಿ ಮೂಡಿಬಂದಿತು. ಸಮಾಜದ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಬೇಕು ಎಂಬ ಆಶಯಕ್ಕೆ ಈ ನೆರವು ಸಾಕ್ಷಿಯಾಯಿತು.

error: Content is protected !!