ಮಾಳ: ಹಾವು ಹಿಡಿದು ಕಾಡಿಗೆ ಬಿಡಲು ತೆರಳಿದ್ದ ಯುವಕ ಅಪಘಾತಕ್ಕೆ ಬಲಿ!

ಕಾರ್ಕಳ : ಟಿಪ್ಪರ್‌ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು(ಮಾ.24) ಬೆಳಗ್ಗೆ ಮಾಳ ಮುಳ್ಳೂರಿನಲ್ಲಿ ನಡೆದಿದೆ.

ನವೀನ್‌ ಬಜಗೋಳಿ ಮೃತ ಸ್ಕೂಟರ್‌ ಸವಾರ.

ನವೀನ್‌ ವೆಲ್ಡಿಂಗ್‌ ಕೆಲಸ ನಿರ್ವಹಿಸುತ್ತಿದ್ದು, ಇದರ ಜೊತೆಗೆ ಹಾವು ಹಿಡಿಯುವ ಕೆಲಸವನ್ನೂ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಎಲ್ಲಿಯೋ ಹಾವು ಹಿಡಿದು ಕಾಡಿಗೆ ಬಿಡಲೆಂದು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದ್ದು, ಪರಿಣಾಮವಾಗಿ ನವೀನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಕೂಟಿಯ ಸಹಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!