ನವದೆಹಲಿ: ಗಲ್ಫ್ ಸಂಘರ್ಷದ ಕಾರಣದಿಂದ ಎಲ್‌ಪಿಜಿ ಲಭ್ಯತೆಯ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಎಲ್‌ಪಿಜಿ ಪೂರೈಕೆ ಸಿಗುವಂತಾಗಲು ಸರ್ಕಾರ 14.2 ಕಿಲೋ ಎಲ್‌ಪಿಜಿ ಬದಲು 10 ಕಿಲೋ ಎಲ್‌ಪಿಜಿ ಸಿಲಿಂಡರ್ಗಳ ವಿತರಿಸಲು ಆಲೋಚಿಸಿವೆ.

ಎಲ್‌ಪಿಜಿ ಲಭ್ಯತೆ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇರುವುದು. ಹೀಗಾಗಿ, ಗೃಹಬಳಕೆಗೆ ಎಲ್‌ಪಿಜಿ ಕಡಿಮೆ ಪ್ರಮಾಣದ ಇರುವ ಸಿಲಿಂಡರ್ ಅನ್ನು ನೀಡಿದರೆ ಹೆಚ್ಚೆಚ್ಚು ಮನೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಒಂದು ಆಲೋಚನೆ. ಪಶ್ಚಿಮ ಏಷ್ಯಾದ ಯುದ್ಧದ ಸ್ಥಿತಿ ದೀರ್ಘಕಾಲ ಮುಂದುವರಿಯದೇ ಇದ್ದರೆ ಈ ತಂತ್ರ ಕೆಲಸ ಮಾಡುತ್ತದೆ.

ಭಾರತದ ಶೇ. 60ರಷ್ಟು ಎಲ್‌ಪಿಜಿ ಅಗತ್ಯವನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಆದರೆ ಶೇ. 80ಕ್ಕಿಂತಲೂ ಹೆಚ್ಚು ಆಮದು ಹಾರ್ಮುಜ್ ಜಲಸಂಧಿ ಮಾರ್ಗದಿಂದ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.


ಭಾರತದಲ್ಲಿ ಗೃಹಬಳಕೆಗೆ 14.2 ಕಿಲೋ ಎಲ್‌ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಸಣ್ಣ ಕುಟುಂಬಕ್ಕೆ ಈ ಸಿಲಿಂಡರ್ನಲ್ಲಿರುವ ಗ್ಯಾಸ್ ಒಂದರಿಂದ ಮೂರು ತಿಂಗಳವರೆಗೆ ಬಾಳಿಕೆ ಬರುತ್ತದೆ. 10 ಕಿಲೋ ಎಲ್‌ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳು ಬರಬಹುದು.
14.2 ಕಿಲೋ ಎಲ್‌ಪಿಜಿ ಸಿಲಿಂಡರ್ನಲ್ಲೇ 10 ಕಿಲೋ ಎಲ್‌ಪಿಜಿ ರೀಫಿಲ್ ಮಾಡಲಾಗುತ್ತದೆ.