ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ವಿಡಿಯೋ ಹಂಚಿಕೊಂಡ ಆರೋಪಿ ಪೊಲೀಸರ ವಶ

ಮಂಗಳೂರು: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ 2025ರ ಅಕ್ಟೋಬರ್ ನಲ್ಲಿ ‘ನಝೀರ ಮಂಗಳೂರು’ ಎಂಬ ಫೇಸ್ ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸಿರುವ ಪ್ರಕರಣದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಡಗಬೆಳ್ಳೂರು ಗ್ರಾಮದ ಕೊಳ್ತಮಜಲ ನಿವಾಸಿ ರಫೀಕ್(38) ಬಂಧಿತ ಆರೋಪಿ.

ರಫೀಕ್ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘‘ನಝೀರ ಮಂಗಳೂರು’’ ಎಂಬ ಫೇಸ್ ಬುಕ್ ಖಾತೆಯಿಂದ ಆರೋಪಿಯು ವಿಡಿಯೋ ಶೇರ್ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು.

ಬೆಂಗಳೂರಿನಲ್ಲಿ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!