ಮಾ. 28ರಂದು ಉರ್ವಸ್ಟೋರ್ ಸಂಕದಕಟ್ಟೆಯಲ್ಲಿ ಕೊರಗತನಿಯ ದೈವದ ನೇಮ

ಮಂಗಳೂರು: ನಗರದ ಉರ್ವಸ್ಟೋರ್ ಸಂಕದಕಟ್ಟೆಯಲ್ಲಿರುವ ಪುರಾಣ ಪ್ರಸಿದ್ಧ ‘ಶ್ರೀ ಕೊರಗಜ್ಜನ ಗುಡಿ’ಯಲ್ಲಿ ಇದೇ ಮಾರ್ಚ್ 28ರ ಶನಿವಾರದಂದು ಶ್ರೀ ಕೊರಗತನಿಯ ದೈವದ ನೇಮೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಅಂದು ಬೆಳಿಗ್ಗೆ 6:00 ಗಂಟೆಗೆ ಗಣಹೋಮ ನೆರವೇರಲಿದೆ. ಸಂಜೆ 6:00 ಗಂಟೆಗೆ ಪಂಜುರ್ಲಿ ದರ್ಶನ ಸೇವೆ ಜರುಗಲಿದ್ದು, ತದನಂತರ ರಾತ್ರಿ 11:00 ಗಂಟೆಗೆ ಸರಿಯಾಗಿ ಶ್ರೀ ಕೊರಗತನಿಯ ದೈವದ ನೇಮ ಆರಂಭವಾಗಲಿದೆ.

ಈ ಪುಣ್ಯ ಕಾರ್ಯಕ್ರಮಕ್ಕೆ ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಉರ್ವಸ್ಟೋರ್ ಸಂಕದಕಟ್ಟೆಯ ಎ. ಭೋಜ ಹಾಗೂ ಹತ್ತು ಸಮಸ್ತರು ವಿನಂತಿಸಿದ್ದಾರೆ.

error: Content is protected !!