ಮೂಡಬಿದಿರೆ: ಕಾರ್ಕಳದಲ್ಲಿ 2025ರ ಅಕ್ಟೋಬರ್ ನಲ್ಲಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾಥಿ೯ ಸಾತ್ವಿಕ್ ಕುಲಾಲ್ (21) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಅಪಘಾತದ ವೇಳೆ ಸಾತ್ವಿಕ್ ಗಂಭೀರ ಗಾಯಗೊಂಡಿದ್ದು, ಬಳಿಕ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.\


ಸಾತ್ವಿಕ್ ಮೂಡಬಿದಿರೆಯ ಪಡುಮಾರ್ನಾಡು ನಿವಾಸಿಗಳಾದ ಶ್ಯಾಮ್ ಅಂಚನ್ ಹಾಗೂ ಜಯಂತಿ ಕುಲಾಲ್ ಅವರ ಪುತ್ರ.