ಪ್ಯಾಂಟ್‌ ಜೇಬಿನಲ್ಲಿರಿಸಿದ್ದ ಮೊಬೈಲ್‌ ಫೋನ್‌ ಸ್ಫೋಟ; ಯುವಕನಿಗೆ ಗಾಯ

ಸುಳ್ಯ: ಮೊಬೈಲ್‌ ಫೋನ್‌ ಜೇಬಿನಲ್ಲೇ ಸ್ಫೋಟಗೊಂಡು ಯುವಕ ಗಾಯಗೊಂಡಿರುವ ಘಟನೆ ಸುಳ್ಯದಲ್ಲಿ ಸಂಭವಿಸಿದೆ.

ಸುಳ್ಯದ ಕಲ್ಮಕಾರಿನ ನಿವಾಸಿ ಗುರುಪ್ರಸಾದ್ ನಿಡುಬೆ ಗಾಯಾಳು.

ಗುರುಪ್ರಸಾದ್ ಮೊಬೈಲನ್ನು ತನ್ನ ಪ್ಯಾಂಟ್‌ನ ಜೇಬಿನೊಳಗೆ ಇಟ್ಟುಕೊಂಡಿದ್ದರು. ಈ ವೇಳೆ ಮೊಬೈಲ್‌ ಸ್ಫೋಟಗೊಂಡಿರುವ ಕಾರಣ ತೊಡೆಯ ಚರ್ಮ ಬೆಂದು ಹೋಗಿದ್ದು, ಗಾಯಾಳು ಗುರುಪ್ರಸಾದ್ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

error: Content is protected !!