ಕುಂದಾಪುರ: ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ 23 ವರ್ಷದೊಳಗಿನ ತಂಡಕ್ಕೆ ಕುಂದಾಪುರ ಮೂಲದ ಹರ್ಷ್ ಯು. ಮೊಗವೀರ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದ ಬೇಲಾಪುರ ಸಿಬಿಡಿ ಪರಿಸರದ ಹರ್ಷ್ ಅವರು ಮೂಲತಃ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆ ಮಾತೋಶ್ರೀ ನಿಲಯದ ಉದಯ್ ಕೆ. ಮೊಗವೀರ ಮತ್ತು ಹೇಮಾ ಯು. ಮೊಗವೀರ ದಂಪತಿ ಪುತ್ರ.


ಮಹಾರಾಷ್ಟ್ರದ ನ್ಯೂ ಪನ್ವೆಲ್ ಪಿಳ್ಳೈ ಮಹಾವಿದ್ಯಾಲಯದಲ್ಲಿ ಎಂಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಪುಣೆಯ ಪುನೀತ್ ಬಾಲನ್ ಗ್ರೂಪ್‌ನ ಕ್ರಿಕೆಟ್ ತರಬೇತುದಾರ ಅಕ್ಷಯ ಧರೆಕರ್ ಮತ್ತು ಖಾರ್ ಘರ್‌ನ ಸ್ವಪ್ನಿಲ್ ಕದಂ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.