
ಕಿನ್ನಿಗೋಳಿ: ಎಕ್ಕಾರ್ ಸಮೀಪ ಬುಲೆಟ್ ಬೈಕ್ ಖಾಸಗಿ ಸರ್ವಿಸ್ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದ್ದು ಬೈಕ್ ಸವಾರ ಕಿನ್ನಿಗೋಳಿ ಕಾಪಿಕಾಡ್ ನಿವಾಸಿ ಕಾರ್ ಮೋನಾಕಾ ಎಂಬವರ ಪುತ್ರ ಬಶೀರ್ ಸಾವನ್ನಪ್ಪಿದ್ದಾರೆ.

ರಾಜ್ ಕುಮಾರ್ ಹೆಸರಿನ ಬಸ್ಸಿಗೆ ವಿರುದ್ಧ ದಿಕ್ಕಿನಲ್ಲಿ ಬಂದ ಡಿಕ್ಕಿ ಹೊಡೆದಿದೆ. ಯುವಕನ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟರೆಂದು ಹೇಳಲಾಗಿದೆ.