
ಮಂಗಳೂರು: ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನದಿಂದ ತೆರವಾದ ಸ್ಥಾನಕ್ಕೆ ಪಾಣಕ್ಕಾಡ್ ಸಯ್ಯಿದ್ ನಾಸೀರ್ ಹಯ್ಯ್ ಶಿಹಾಬುದ್ದೀನ್ ಬಾ-ಅಲವಿ ತಂಙಳ್ ಖಾಝಿಯಾಗಿ ಜು.೨೨ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಬಗ್ಗೆ ನಿನ್ನೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಅಯೋಜಕ ಕೆ.ಅಶ್ರಫ್ ಮಾತನಾಡಿ, ಪ್ರವಾದಿ(ಸ) ಅವರ ವಂಶಕ್ಕೆ ಸೇರಿರುವ, ಬ್ರಿಟಿಷ್ ಶಾಹಿ ಆಡಳಿತದ ವಿರುದ್ಧ ಪ್ರಭಾವಿ ನಾಯಕತ್ವ ಗುಣದಿಂದ ಗುರುತಿಸಿಕೊಂಡಿದ್ದ ಪಾಣಕ್ಕಾಡ್ ಸಯ್ಯಿದ್ ಹುಸೈನ್ ಅಟ್ಟಕ್ಕೋಯ ತಂಙಳ್ ಪರಂಪರೆಯನ್ನು ಹೊಂದಿರುವ ಶಿಹಾಬುದ್ದೀನ್ ತಂಙಳ್, ಅಂಡಮಾನ್ ದ್ವೀಪ, ಕೋಝಿಕ್ಕೋಡು ವಲಿಯ ಖಾಝಿಯಾಗಿದ್ದಾರೆ. ಅಲ್ಲದೆ ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ೩೭೦ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿಸಿದರು.
ಪಾಣಕ್ಕಾಡ್ ಸಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ೧೯೬೬ರ ಮೇ.೨ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್ ಎಂಬಲ್ಲಿ ಜನಿಸಿದರು. ಓತುಪಲ್ಲಿಯಲ್ಲಿ ಶಿಕ್ಷಣವನ್ನು ಆರಂಭಿಸಿ ಪಲ್ಲಿದರ್ಸ್ ಮೂಲಕ ೧೩ ವರ್ಷಗಳವರೆಗೆ ಇಸ್ಲಾಮಿಕ್ ಅಧ್ಯಯನವನ್ನು ಮುಂದುವರಿಸಿದರು. ಅಪಾರ ಪಾಂಡಿತ್ಯವನ್ನು ಹೊಂದಿರುವ ಅವರು, ಪ್ರವಾದಿ ಮುಹಮ್ಮದ್ (ಸ) ಅವರ ಕುಟುಂಬ ಪರಂಪರೆಯ ಯಮನಿ ಸಯ್ಯಿದ್ ವಂಶಕ್ಕೆ ಸೇರಿದವರು. ಸನದು(ಬಿರುದು) ಪಡೆದ ಬಳಿಕ ಹಲವು ಮಸೀದಿಗಳು, ಇಸ್ಲಾಮಿಕ್ ಸಂಸ್ಥೆಗಳಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದಾರೆ. ತನ್ನ ತಂದೆಯ ನಿಧನದ ಬಳಿಕ ಅಂಡಮಾನ್ ದ್ವೀಪಗಳಲ್ಲಿ ಖಾಝಿಯಾಗಿ ಜವಾಬ್ದಾರಿ ವಹಿಸಿಕೊಂಡರು. ೨೦೦೯ರಲ್ಲಿ ಕಲ್ಲಿಕೋಟೆಯ ಗ್ರ್ಯಾಂಡ್ ಖಾಝಿಯಾಗಿ ನಿಯುಕ್ತಿಗೊಳಿಸಲಾಗಿದೆ. ಪ್ರಸಕ್ತ ಕಲ್ಲಿಕೊಟೆ, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್ ಜಿಲ್ಲೆಗಳ ೩೭೦ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಯನಾಡಿನ ಇಮಾಮ್ ಗಝ್ಝಾಲಿ ಅಕಾಡಮಿ ಮತ್ತು ರಶೀದಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿ, ವಯನಾಡಿನ ಸೈನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಲೀಡರ್‌ಶಿಪ್‌ನ ಪೋಷಕರಾಗಿದ್ದಾರೆ. ಮಲಪ್ಪುರಂ ಸುನ್ನಿ ಮಹಲ್ಲ್ ಫೆರಡೇಶನ್, ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷರಾಗಿ, ಕೇರಳ ರಾಜ್ಯ ಸುನ್ನಿ ಯುವಜನ ಸಂಘದ ಸದಸ್ಯರಾಗಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತಿರೂರಙ್ಙಾಡಿ ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಶ್ರಫ್ ತಿಳಿಸಿದರು.

ಜುಲೈ ೨೨ರಂದು ಮಧ್ಯಾಹ್ನ ೧:೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಘಟಾನುಘಟಿ ಧಾರ್ಮಿಕ ವಿಧ್ವಾಂಸರು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆಂದು ಅಶ್ರಫ್ ಮಾಹಿತಿ ನೀಡಿದರು. ಸಯ್ಯಿದುಲ್ ಉಮ್ಮ ಸ್ವಾಧಿಕ್ ಅಲಿ ಶಿಹಾಬ್ ತಂಙಳ್, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಕೋಶಾಧಿಕಾರಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಹಮೀದ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಆಟಕೋಯ ಕುಂಬೋಳ್ ತಂಙಳ್, ಸಯ್ಯಿದ್ ಅಲೀ ತಂಙಳ್ ಕುಂಬೋಳ್, ಲಕ್ಷದ್ವೀಪ ಖಾಝಿ ಇ.ಪಿ.ಸೈದಾಲಿ ತಂಙಳ್, ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್, ಉಸ್ಮಾನುಲ್ ಫೈಝಿ ತೋಡಾರ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಮದ್ ಪೂಕೋಟೂರು, ಸಚಿವ ಯು.ಟಿ.ಖಾದರ್ ಸಹಿತ ಗಣ್ಯರ ದಂಡೇ ಸಮಾರಂಭದಲ್ಲಿ ಹಾಜರಿರಲಿದೆ ಎಂದು ಅಶ್ರಫ್ ಹೇಳಿದರು.
ನಾಳೆ ಮಧ್ಯಾಹ್ನ ೧:೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಘಟಾನುಘಟಿ ಧಾರ್ಮಿಕ ವಿಧ್ವಾಂಸರು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆಂದು ಅಶ್ರಫ್ ಮಾಹಿತಿ ನೀಡಿದರು.
ಸಯ್ಯಿದುಲ್ ಉಮ್ಮ ಸ್ವಾಧಿಕ್ ಅಲಿ ಶಿಹಾಬ್ ತಂಙಳ್, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಕೋಶಾಧಿಕಾರಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಹಮೀದ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಆಟಕೋಯ ಕುಂಬೋಳ್ ತಂಙಳ್, ಸಯ್ಯಿದ್ ಅಲೀ ತಂಙಳ್ ಕುಂಬೋಳ್, ಲಕ್ಷದ್ವೀಪ ಖಾಝಿ ಇ.ಪಿ.ಸೈದಾಲಿ ತಂಙಳ್, ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್, ಉಸ್ಮಾನುಲ್ ಫೈಝಿ ತೋಡಾರ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಮದ್ ಪೂಕೋಟೂರು, ಸಚಿವ ಯು.ಟಿ.ಖಾದರ್ ಸಹಿತ ಗಣ್ಯರ ದಂಡೇ ಸಮಾರಂಭದಲ್ಲಿ ಹಾಜರಿರಲಿದೆ ಎಂದು ಅಶ್ರಫ್ ಹೇಳಿದರು.
. ಸಮಾರಂಭದಲ್ಲಿ ಸಮಸ್ತದ ಅಧ್ಯಕ್ಷರಾಗಿರುವ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಬಿಝಿಯಾಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಮಂಗಳೂರು ಕೇಂದ್ರ ಜುಮಾ ಮಸೀದಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಝೀನತ್ ಭಕ್ಷ್ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್, ಹಾಜಿ ಅಬ್ದು ಸಮದ್, ಮೊಹಮ್ಮದ್ ಅಶ್ರಫ್ ಹಳೆಮನೆ, ಮಕ್ಸೂಲ್ ಅಹ್ಮದ್, ಅದ್ದು ಹಾಜಿ, ಐ.ಮೊಯಿದ್ದಿನಬ್ಬ ಹಾಜಿ, ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
