
ಕಾಟಿಪಳ್ಳ: ವಿಶ್ವ ದೇವಾಡಿಗ ಮಹಾಮಂಡಲದ ಆಶ್ರಯದಲ್ಲಿ ದಿನಾಂಕ :20-12-2026 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ಪೂರ್ವಬಾವಿ ಸಭೆಯು ಕೃಷ್ಣಾಪುರ ಕಾಂತ ಬಸ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಕಾಟಿಪಳ್ಳ ಇಲ್ಲಿನ ದಿ. ವೀರಪ್ಪ ದೇವಾಡಿಗ ವೇದಿಕೆಯಲ್ಲಿ ವಿಶ್ವ ಮಹಾ ಮಂಡಳದ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಮಾತನಾಡುತ್ತಾ,ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು
ವಿವರಿಸಿದರು. ತನ್ನನ್ನು ಅಭಿನಂದಿಸಿದ ಬಗ್ಗೆ ಉತ್ತರವಾಗಿ ಈ ಸನ್ಮಾನವು ನನ್ನ ಜೊತೆ ಹಗಲಿರುಳು ಶ್ರಮಿಸುವ ನನ್ನ ತಂಡಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಮಹಾ ಮಂಡಳದ ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಕಾರ್ಯದರ್ಶಿ ಯಾದವ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರ ಪವನ್ ಕುಮಾರ್ ಧರ್ಮಪಾಲ್ ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮೊಯಿಲಿ, ಕೋಶಾಧಿಕಾರಿ ಸುರೇಶ ಕೊಡವೂರುಕಾಂತ ಬಸ ಟ್ರಸ್ಟಿನ ಹಿರಿಯರಾದ ಗುಡ್ಡಣ್ಣದೇವಾಡಿಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಸಂತ ದೇವಾಡಿಗ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ನೀಡಿದರು.

ಈ ಕಾರ್ಯಕ್ರಮವನ್ನು ಅಶೋಕ್ ಪಾವಂಜೆ ಸಂಯೋಜನೆ ಮಾಡಿದ್ದರು. ಮತ್ತು ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.
