ಸುರತ್ಕಲ್: ನಿಯಂತ್ರಣ ತಪ್ಪಿ ಪೊಲೀಸ್‌ ವಾಹನ ಪಲ್ಟಿ

ಸುರತ್ಕಲ್: ಮಂಗಳೂರು ನಗರದ ಹೊರವಲಯದ ಸುರತ್ಕಲ್ ಸಮೀಪದ ತಡಂಬೈಲ್‌ನಲ್ಲಿ ಪೊಲೀಸರ ಗಸ್ತು ವಾಹನ ʻಹೊಯ್ಸಳ’ ಪಲ್ಟಿ ಹೊಡೆದ ಬುಧವಾರ ತಡ ರಾತ್ರಿ ನಡೆದಿದೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ತಡಂಬೈಲ್ ರಸ್ತೆಯಲ್ಲಿ ಚಾಲಕನ ನಿಯಂ ತಪ್ಪಿ ಈ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ.

ಅದೃಷ್ಟವಶಾತ್ ಚಾಲಕ ಸೇರಿದಂತೆ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಇತರ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ತಡರಾತ್ರಿಯೇ ಪಲ್ಟಿ ಹೊಡೆದಿದ್ದ ಹೊಯ್ಸಳ ವಾಹನವನ್ನು ರಸ್ತೆಯಿಂದ ತೆರವುಗೊಳಿಸಲಾಗಿದೆ.

ತಾಂತ್ರಿಕ ದೋಷ ಅಥವಾ ಚಾಲಕನ ಅಚಾತುರ್ಯವೇ ಅಪಘಾತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.

error: Content is protected !!