ಪಾದಚಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು

ಮುಳಬಾಗಿಲು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಬಾಳಸಂದ್ರ ಗ್ರಾಮದ ನಿವಾಸಿ ಶಾಮೇಗೌಡ (34) ಮೃತ ವ್ಯಕ್ತಿ.

ಶಾಮೇಗೌಡ ಬುಧವಾರ(ಫೆ.25) ಬೆಳಗ್ಗೆ ಎಂದಿನಂತೆ ತಮ್ಮ ತೋಟಕ್ಕೆ ಹೋಗಿ ವಾಪಸ್ ಮನೆಗೆ ಹೋಗುವಾಗ ಮುಳಬಾಗಿಲು ಕಡೆಯಿಂದ ಬಾಳಸಂದ್ರಕ್ಕೆ ಹೋಗುತ್ತಿದ್ದ ಬಸ್ ಹಿಂಬಂದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಗುದ್ದಿದ ರಭಸಕ್ಕೆ ಮೃತ ಶಾಮೇಗೌಡ ಬಸ್ ಅಡಿಯಲ್ಲಿ ಸಿಲುಕಿದ್ದು, ಸುಮಾರು 20 ರಿಂದ 30 ಮೀಟರ್ ಎಳೆದುಕೊಂಡು ಹೋಗಿದ್ದು ರಸ್ತೆಯುದ್ದಕ್ಕೂ ರಕ್ತ ಚೆಲ್ಲಿದೆ.

ಕೆಎಸ್ಆರ್‌ಟಿಸಿ ಜಿಲ್ಲಾಧಿಕಾರಿ ಎನ್. ಶ್ರೀನಾಥ್, ವಿಭಾಗೀಯ ಭದ್ರತಾ ಅಧಿಕಾರಿ ಚಂದ್ರೇಗೌಡ, ತಾಂತ್ರಿಕ ಅಧಿಕಾರಿ ಶಾಂತ ಕುಮಾರ್, ಘಟಕ ವ್ಯವಸ್ಥಾಪಕ ಅನ್ಸರ್ ಪಾಷಾ, ಕಾನೂನು ಅಧಿಕಾರಿ ಮಂಜುನಾಥ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!