ಜು.16: ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ: “ಸಮೃದ್ಧಿ ಕೆರಿಯರ್ ನೆಕ್ಸ್-2026”

ಮಂಗಳೂರು: ಕರಾವಳಿಯ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳ ಹೆಬ್ಬಾಗಿಲನ್ನು ತೆರೆಯುವ ನಿಟ್ಟಿನಲ್ಲಿ, ಮಂಗಳೂರಿನ ಗಾಂಧಿನಗರದಲ್ಲಿರುವ ಪ್ರಸಿದ್ಧ ಶ್ರೀ ಗೋಕರ್ಣನಾಥೇಶ್ವರ ಕಾಲೇಜು (ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ (R) ಆಡಳಿತದಲ್ಲಿರುವ ಸಂಸ್ಥೆ) ತನ್ನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಉಪಕ್ರಮದಡಿಯಲ್ಲಿ ಬೃಹತ್ ಹೆಜ್ಜೆಯನ್ನಿಟ್ಟಿದೆ.
ಪ್ರತಿಷ್ಠಿತ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (KCCI) ಮಂಗಳೂರು ಇದರ ಸಹಯೋಗದೊಂದಿಗೆ, 20260 ಕಾಲೇಜಿನ ಆವರಣದಲ್ಲಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ. ಜುಲೈ 168 “SAMVRIDHI ಗುರುವಾರದಂದು CareerNxt-2026″ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನಡೆಯಲಿರುವ ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಕಾರ್ಪೊರೇಟ್ ಜಗತ್ತಿಗೆ ನೇರ ಪ್ರವೇಶ ಕಲ್ಪಿಸುವ ದಾರಿದೀಪವಾಗಲಿದೆ.

ಉದ್ಯೋಗ ಮೇಳದ ಪ್ರಮುಖ ಮುಖ್ಯಾಂಶಗಳು :
ರಾಜ್ಯದ ಪ್ರಮುಖ 35 ರಿಂದ 40 ಪ್ರತಿಷ್ಠಿತ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಿವೆ.
ಕೇವಲ ಕಾಯಂ ಉದ್ಯೋಗ ಮಾತ್ರವಲ್ಲದೆ, ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ತಕ್ಷಣದ ಆದಾಯದ ನಿರೀಕ್ಷೆಯಲ್ಲಿರುವವರಿಗಾಗಿ ಪೂರ್ಣಾವಧಿ ಉದ್ಯೋಗ ಅರೆಕಾಲಿಕ ಉದ್ಯೋಗ ಹಾಗೂ ಇಂಟರ್ನ್‌ಶಿಪ್‌ ಪಡೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ.

ಐಟಿಐ (ITI), ಡಿಪ್ಲೊಮಾ (Diploma), ಯಾವುದೇ ಪದವಿ (UG Degree) ಹಾಗೂ ಸ್ನಾತಕೋತ್ತರ ಪದವಿ (PG Degree) ಹೊಂದಿರುವ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ.

ವಿಶೇಷವಾಗಿ ವಾಣಿಜ್ಯ (Commerce), ಕಲೆ (Arts) ಹಾಗೂ ಮ್ಯಾನೇಜೆಂಟ್ (Management) ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನೂರಾರು ಉದ್ಯೋಗಾವಕಾಶಗಳು ಕಾಯುತ್ತಿವೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಸುತ್ತಮುತ್ತಲಿನ ಕರಾವಳಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು” ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ

ಬ್ರಹ್ಮಶ್ರೀ ನಾರಾಯಣ ಗುರುಗಳ “ವಿದ್ಯಾಯಿಂದ ಸ್ವತಂತ್ರರಾಗಿ – ಸಂಘಟನೆಯಿಂದ ಬಲಿಷ್ಠರಾಗಿ ಎಂಬ ದಿವ್ಯ ಸಂದೇಶದ ಅಡಿಯಲ್ಲಿ ನಮ್ಮ ಈ ಶಿಕ್ಷಣ ಸಂಸ್ಥೆಯು ಪ್ರಾರಂಭವಾಯಿತು.

ಹಾಗೂ ಸನ್ಮಾನ್ಯ ಶ್ರೀ ಜನಾರ್ದನ ಪೂಜಾರಿಯವರ ದೂರದರ್ಶಿತ್ವ, ಅಮೂಲ್ಯ ಸಹಾಯ, ಸಹಕಾರ ಮಾರ್ಗದರ್ಶನದಲ್ಲಿ 1982ರಲ್ಲಿ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯನ್ನು, ಬಡತನದ ಕಾರಣದಿಂದಾಗಿ ಸಮಾಜದ ಯಾವುದೇ ಒಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು; ಜಾತಿ-ಮತ-ಧರ್ಮದ ಭೇದವಿಲ್ಲದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಶ್ರೀ ಜನಾರ್ದನ ಪೂಜಾರಿಯವರ ಆದೇಶದಂತೆ ನಮ್ಮ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು. ಇದೀಗ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗುವ ಉದ್ಯೋಗ ಮೇಳವನ್ನು ಆಯೋಜಿಸಿರುವುದು ಸಂಸ್ಥೆಯ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ (Free Registration) ಎಲ್ಲಾ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದೆ.

ಆಸಕ್ತ ಅಭ್ಯರ್ಥಿಗಳು ಕಾಲೇಜು ಒದಗಿಸಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಸಂದರ್ಶನಕ್ಕೆ ಬರುವ ಉದ್ಯೋಗಾಕಾಂಕ್ಷಿಗಳು ತಮ್ಮ ಅಪ್‌ಡೇಟೆಡ್‌ ರೆಸ್ಟೋಮ್‌ (Resume) ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳ ಪ್ರತಿಗಳೊಂದಿಗೆ ಹಾಜರಾಗಿ ಈ ಬೃಹತ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
99009 03802/7829047600

ಸುದ್ದಿಗೊಷ್ಟಿಯಲ್ಲಿ ನ್ಯಾಯವಾದಿ ವಸಂತ ಕಾರಂದೂರ್, ಸಂಚಾಲಕರು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ, ಮುದಾಸಿ‌ರ್, ಅಧ್ಯಕ್ಷರು, ಕೆ.ಸಿ.ಸಿ.ಐ., ನಾಗೇಶ್ ಕರ್ಕೇರ, ಆಡಳಿತ ಅಧಿಕಾರಿ, ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ., ಡಾ. ಜಯಪ್ರಕಾಶ್ ಪ್ರಾಂಶುಪಾಲರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮೈತ್ರಿಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ.ಸಿ.ಸಿ.ಐ., ಡಾ. ಯತೀನ್, ಐ.ಕ್ಯೂ.ಎ.ಸಿ, ಸಂಯೋಜಕರು ಉಪಸ್ಥಿತರಿದ್ದರು.

error: Content is protected !!