
ಸುರತ್ಕಲ್: ಹಿರಿಯ ರಂಗಕರ್ಮಿ, ಪತ್ರಕರ್ತ, ಸಾಹಿತಿ ಪರಮಾನಂದ ಸಾಲಿಯಾನ್ ಸಸಿಹಿತ್ಲು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಸುಕಿನ ಜಾವ ನಿಧನರಾದರು.
ಪರಮಾನಂದ ಸಾಲಿಯಾನ್ ಹಲವಾರು ನಾಟಕಗಳಲ್ಲಿ ನಟಿಸುವುದರ ಜೊತೆಗೆ ರಂಗನಿರ್ದೇಶನ ಮತ್ತು ರಂಗ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಹಲವಾರು ನಾಟಕಗಳನ್ನು ಬರೆದಿದ್ದು ಮಾತ್ರವಲ್ಲದೆ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.

ಹೊಸದಿಗಂತ, ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಸಸಿಹಿತ್ಲು ಸಾರಂತಾಯ ಗರಡಿಯ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದುಕೊಂಡಿದ್ದ ಅವರು, ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು.
