ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾ*ವು!!

ಯಲಹಂಕ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಹೆಸರಘಟ್ಟ ಹೋಬಳಿಯ ಬ್ಯಾತಾ-ಸೀರೇಸಂದ್ರ ಗ್ರಾಮದಲ್ಲಿ ಭಾನುವಾರ(ಫೆ.22) ನಡೆದಿದೆ.

ಹೆಸರಘಟ್ಟ ಜ್ಯೋತಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 3ನೇ ತರಗತಿ ವಿದ್ಯಾರ್ಥಿ ಮನೋಜ್ (9), ಬ್ಯಾತ ಸರ್ಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಮೋಹನ್ (11) ಮೃತ ಬಾಲಕರು.

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ 9 ಗಂಟೆಗೆ ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಈಜಲು ತೆರಳಿದ್ದರು. ಕೆರೆಯ ಅಂಗಳದಲ್ಲಿ ಸುಮಾರು 10 ರಿಂದ 15 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಅದರಲ್ಲಿ ನೀರು ನಿಂತಿತ್ತು. ಈ ವೇಳೆ ಈಜಲು ಇಳಿದ ಇಬ್ಬರು ಬಾಲಕರು ಆಳವಾದ ಗುಂಡಿಯಲ್ಲಿ ಮುಳುಗಿದ್ದಾರೆ. ಎಷ್ಟೋತ್ತಾದರೂ ಹೊರಕ್ಕೆ ಬಾರದಿದ್ದಾಗ ಜೊತೆಯಲ್ಲಿದ್ದಾಗ ಸ್ನೇಹಿತರು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕೆರೆಗೆ ಇಳಿದ ಗ್ರಾಮಸ್ಥರು ಹುಡುಕಾಟ ನಡೆಸಿ ಇಬ್ಬರನ್ನೂ ಹೊರತೆಗೆಯುವುದರೊಳಗೆ ಮೃತಪಟ್ಟಿದ್ದಾರೆ.

ಕೆರೆಯಲ್ಲಿ ನಿಯಮ ಬಾಹಿರವಾಗಿ ಮಣ್ಣು ತೆಗೆಯಲಾಗಿದ್ದು, ಆಳವಾದ ಗುಂಡಿ ನಿರ್ಮಾಣವಾಗಿದೆ. ನಿಯಮಕ್ಕಿಂತ ಹೆಚ್ಚು ಮಣ್ಣು ತೆಗೆದು ಬಾವಿಯಂತಾಗಿರುವುದೇ ದುರಂತಕ್ಕೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

error: Content is protected !!