ಮಂಗಳೂರು: ಮಂಗಳೂರು ನಗರದ ಜನರೇ ಕೇಳಿ, ಫೆಬ್ರವರಿ 24ರ ಮಂಗಳವಾರ ನಿಮ್ಮ ಮನೆಯ ನಲ್ಲಿಗಳಲ್ಲಿ ನೀರು ಹರಿಯುವುದಿಲ್ಲ. ಸುಡುವ ಬಿಸಿಲಿನಲ್ಲಿ ಬಾಯಿ ಒಣಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು.

ತುಂಬೆ ಸ್ಥಾವರಗಳಲ್ಲಿ ಮೆಸ್ಕಾಂ ಸಂಸ್ಥೆ ತನ್ನ ತುರ್ತು ದುರಸ್ತಿ ಕೆಲಸ ಶುರುಮಾಡಲಿದ್ದು, ನಾಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಯಾಗಲಿದೆ ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ. ಸ್ನಾನಕ್ಕೂ ನೀರಿಲ್ಲ, ಕುಡಿಯಲೂ ನೀರಿಲ್ಲ ಎನ್ನುವ ಸ್ಥಿತಿ ಬರುವ ಮುನ್ನವೇ ಬಕೇಟ್, ಹಂಡೆಗಳನ್ನು ತುಂಬಿಸಿಟ್ಟುಕೊಳ್ಳುವುದು ಜಾಣತನ.
